Categories: ಮೈಸೂರು

ಮೈಸೂರು| ಅಗ್ನಿಪಥ್ ಯೋಜನೆ ಯುವಕರ ದಾರಿ ತಪ್ಪಿಸುತ್ತಿದೆ: ಕೆ.ಮರೀಗೌಡ

ಮೈಸೂರು: ದೇಶದ ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದು ಯುವ ಜನರನ್ನು ದಾರಿ ತಪ್ಪಿಸುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ರದ್ದು ಪಡಿಸಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಮರೀಗೌಡ  ಆಗ್ರಹಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಮೈಸೂರು ತಾಲ್ಲೂಕು ಪಂಚಾಯ್ತಿ ಎದುರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಅಗ್ನಿಪಥ್ ಯೋಜನೆ ರಾಷ್ಟ್ರೀಯ ಹಿತಾಶಕ್ತಿಗೆ ವಿರುದ್ಧವಾಗಿದ್ದು, ನಾಲ್ಕು ವರ್ಷಗಳಿಗೆ ಒಪ್ಪಂದದ ಮೇರೆಗೆ ಸೈನಿಕರನ್ನು ನೇಮಿಸಿಕೊಂಡು ವ್ಯತ್ತಿಪರ ಶಸ್ತ್ರಾಸ್ತ್ರ ಪಡೆಗಳನ್ನು ಕಟ್ಟಲು ಸಾಧ್ಯವಿಲ್ಲ. ಶಸ್ತ್ರಾಸ್ತ್ರ ಪಡೆಗಳ ವೃತ್ತಿಪರತೆ, ನೈತಿಕತೆ ಮತ್ತು ಹೋರಾಟದ ಮನೋಭಾವವನ್ನು ಇದು ದುರ್ಬಲಗೊಳಿಸುತ್ತದೆ.

ಇದರಿಂದ ಸೈನ್ಯದ ಗುಣಮಟ್ಟ ಮತ್ತು ದಕ್ಷತೆ ಕುಸಿಯುತ್ತದೆ. ೪ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಂತರ ಮುಂದೆ ಅವರ ಜೀವನದ ಪಾಡೇನು? ಬಜ್ಜಿ, ಬೋಂಡ ಮಾರಿಕೊಂಡು ಜೀವನ ಸಾಗಿಸಬೇಕೆ? ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ. ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುನ್ನ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿ, ಈಗ ವರ್ಷಕ್ಕೆ ೨ ಸಾವಿರ ಉದ್ಯೋಗವನ್ನು ಸೃಷ್ಠಿಸದೆ ಸುಳ್ಳು ಮಾತಿನಲ್ಲೇ ನರೇಂದ್ರ ಮೋದಿಯವರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಯುವ ಜನತೆ ಈಗಲಾದರೂ ಎಚ್ಚೆತ್ತುಕೊಂಡು ಬಿ.ಜೆ.ಪಿ. ಪಕ್ಷಕ್ಕೆ ತಕ್ಕಪಾಠ ಕಲಿಸಬೇಕು ಈ ಕೂಡಲೇ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸಿ ಹಳೆಯ ವ್ಯವಸ್ಥೆಯಲ್ಲಿಯೇ ಸೈನಿಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಮೇಯರ್ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಸಿಂಡಿಕೇಟ್ ಮಾಜಿ ಸದಸ್ಯ ಮಾರ್ಬಳ್ಳಿ ಕುಮಾರ ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯರಾದ ನಾರಾಯಣ ಮಾಹಾದೇವ, ಅರುಣ್‌ಕುಮಾರ್ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದೂರ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಗುರುಸ್ವಾಮಿ, ಜೆ. ಸತೀಶ್‌ಕುಮಾರ್ ಜಿಲ್ಲಾ  ಕಾಂಗ್ರೆಸ್ ಒ.ಬಿ.ಸಿ. ಉಪಾಧ್ಯಕ್ಷ ಉದಯ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕೇರ್ಗಳ್ಳಿ ಬಸವೇಗೌಡ, ನಾಗರತ್ನ, ಸಿದ್ದೇಗೌಡ, ನಾಡನಹಳ್ಳಿ ರವಿ, ತಾ.ಪಂ. ಮಾಜಿ ಸದಸ್ಯ ಕೆಂಚಪ್ಪ, ಮುಖಂಡರಾದ ನಜ಼ರ್‌ಬಾದ್ ನಟರಾಜು, ಹರೀಶ್ ಮೊಗಣ್ಣ, ಹಂಚ್ಯ ಸಣ್ಣಸ್ವಾಮಿ, ಕೃಷ್ಣಕುಮಾರ್‌ಸಾಗರ್, ಆಲನಹಳ್ಳಿ ಪುಟ್ಟಸ್ವಾಮಿ, ನಾಗರಾಜ್‌ನಾರಾಯಣ್, ಬಸವರಾಜ್, ರಾಯನಹುಂಡಿ ರವಿ, ನುಗ್ಗಳ್ಳಿ ಮಹಾದೇವ, ಇಲವಾಲ ಸುರೇಶ್, ನಾನಾಮಹೇಶ್, ಶೆಟ್ಟಳ್ಳಿ ಶಿವರಾಜ್, ಶಂಕರ್ ಇದ್ದರು.

Sneha Gowda

Recent Posts

ಮಂಡಿ ಲೋಕಸಭಾ ಚುನಾವಣೆ : ಕಂಗನಾ ರನೌತ್‌ ನಾಮಪತ್ರ ಸಲ್ಲಿಕೆ

ನಟಿ ಕಂಗನಾ ರನೌತ್‌ ಅಚರು ಇಂದು ಹಿಮಾಚಲ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ರನೌತ್‌ ಅವರು ನಾಮಪತ್ರ…

3 mins ago

ಕೆಎಂಸಿ ಆಸ್ಪತ್ರೆಯಲ್ಲಿ ಈಗ ಮಕ್ಕಳ ರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರು ಲಭ್ಯ

ಮಕ್ಕಳ ರೋಗಶಾಸ್ತ್ರದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಮಕ್ಕಳ ಮೂತ್ರರೋಗಶಾಸ್ತ್ರ ತಜ್ಞರಾದ ಡಾ. ವಿಜಯ್ ಕುಮಾರ್ ಅವರ ಸೇವೆ ಈಗ…

10 mins ago

ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಯುವಕ ಆತ್ಮಹತ್ಯೆಗೆ ಶರಣು

ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಯುವಕನೊಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

23 mins ago

ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಾಖಾಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ…

29 mins ago

ಕುರ್ಕುರೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯಿಂದ ವಿಚ್ಛೇದನ

ಕುರ್ಕುರೆ ಪ್ಯಾಕೆಟ್‌ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ ಬಯಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

50 mins ago

ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಹೆಚ್.ಡಿ. ರೇವಣ್ಣ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ…

1 hour ago