Categories: ಮೈಸೂರು

ಧೈರ್ಯ ಇದ್ದರೆ ಮಾತ್ರ ಸಾಧನೆ ಸಾಧ್ಯ : ಡಾ.ಸುಧಾಮೂರ್ತಿ

ಮೈಸೂರು: ಮಹಿಳೆಯರು ಬದುಕಿನಲ್ಲಿ ಧೈರ್ಯ ಕುಂದಿದಾಗ 800 ವರ್ಷಗಳ ಹಿಂದೆ ಧೀರೋತ್ತಾದ ಬದುಕು ನಡೆಸಿದ ಅಕ್ಕ ಮಹಾದೇವಿಯನ್ನು ನೆನಪು ಮಾಡಿಕೊಳ್ಳಬೇಕು ಎಂದು ಇನ್‌ಫೋಸಿಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಪದ್ಮಭೂಷಣ ಡಾ.ಸುಧಾಮೂರ್ತಿ ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಕ್ಕ ಮಹಾದೇವಿ ಜಯಂತಿಯಲ್ಲಿ ಕದಳಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 800 ವರ್ಷಗಳ ಹಿಂದೆ ಒಬ್ಬ ಮಹಿಳೆ ತಾನು ತನ್ನ ಜೀವನದ ಗುರಿ ತಿಳಿದುಕೊಂಡು ಏಕಾಂಕಿಯಾಗಿ ಓಡಾಡಿ ಕಲ್ಯಾಣ ತಲುಪಿ ಅನುಭವ ಮಂಟಪದಲ್ಲಿ ವಚನ ಬರೆದು, ಹೇಳಿದ ಮಾತುಗಳು ಈ ಕಾಲಕ್ಕೂ ಪ್ರಾತಃಸ್ಮರಣೀಯವಾಗಿವೆ. ದಿಟ್ಟತನದಿಂದ ಅನ್ಯಾಯ ಎದುರಿಸಿ ಶ್ರೇಷ್ಠ ಸಾಹಿತ್ಯ ನೀಡಿದ್ದಾರೆ ಎಂದು ನುಡಿದರು.

50ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಅವರ ಕದಳಿ ಕರ್ಪೂರ ಓದಿದೆ. ಅನಂತರ ಕದಳಿ, ಕಲ್ಯಾಣ ತನಕ ಹೋಗಿ ಬಂದೆ. ಅಕ್ಕನನ್ನು ತಿಳಿಯುವ ಪ್ರಯತ್ನ ಮಾಡಿದೆ. ಶ್ರೀಶೈಲಕ್ಕೆ ಹೋಗಲಾಗಲಿಲ್ಲ. 17ನೇ ವಯಸ್ಸಲ್ಲಿ 2 ಸಾವಿರ ವಚನಗಳನ್ನು ಕಲಿತಿದ್ದೆ. 44ನೇ ವಯಸ್ಸಿನಲ್ಲಿ ವಚನಗಳ ಅರ್ಥ ತಿಳಿದುಕೊಂಡೆ. 50ನೇ ವಯಸ್ಸಿನಲ್ಲಿ ಅನುಷ್ಠಾನಕ್ಕೆ ತಂದಿದ್ದೇನೆ ಎಂದು ವಿವರಿಸಿದರು.

ಧೈರ್ಯ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಪಕ್ಕದ ಮನೆಯವರು, ಬೀಗರು, ಸಂಬಂಧಿಕರು ಏನಂದುಕೊಳ್ಳುವರೆಂದು ಚಿಂತಿಸಿದರೆ ಸಾಧಿಸಲಾಗದು. ಹೆದರದೇ ನಿನ್ನನ್ನು ನೀನು ನಂಬುವಂತೆ ಹೇಳಿದ್ದು ಅಕ್ಕಮಹಾದೇವಿ. ಇನ್‌ಫೋಸಿಸ್ ಆರಂಭಿಸುವಾಗ ನಮ್ಮ ಬಳಿ ದುಡ್ಡು ಇರಲಿಲ್ಲ. ಧೈರ್ಯ ಇತ್ತು. ಆ ಧೈರ್ಯ ಅಕ್ಕಮಹಾದೇವಿಯಿಂದ ಬಂದದ್ದು ಎಂದರು.

ತಾಯಂದಿರು ಮಕ್ಕಳಿಗೆ ವಚನ ಹೇಳಿಕೊಡಬೇಕು. ಈಗ ಅರ್ಥವಾಗದಿದ್ದರೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ಅಲ್ಲಮಪ್ರಭು, ಆಯ್ದಕ್ಕಿ ಮಾರವ್ವ ಮುಂತಾದವರ ಬದುಕಿನ ಬಗ್ಗೆ ಸರಳವಾಗಿ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಅಕ್ಕನ ಒಂದು ವಚನ ಇತರ ಶರಣರ ಎರಡು ವಚನಕ್ಕೆ ಸಮ ಎಂದು ಹಿರಿಯರು ಹೇಳಿದ್ದಾರೆ. ಸಾಹಿತ್ಯ ಎಂದರೆ ಕೇವಲ ಶಬ್ಧವಲ್ಲ. ದೇಶ ಎಂದರೆ ಗಡಿ ಮಾತ್ರವಲ್ಲ. ಸಾಹಿತ್ಯ ಮತ್ತು ದೇಶ ಎಂದರೆ ಭಾವಗಳು. ಕಠಿಣವಾದ ಪಠ್ಯಕ್ಕಿಂತ ಸರಳವಾದ ವಚನ ಓದುವುದೇ ಲೇಸು ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಸ್.ಇಂದುಮತಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಇದ್ದರು.

Sneha Gowda

Recent Posts

ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…

6 hours ago

ಮೇ 01 ರಂದು ಕರ್ನಾಟಕಕ್ಕೆ ಅಮಿತ್​ ಶಾ ಎಂಟ್ರಿ

ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…

7 hours ago

ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…

7 hours ago

ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…

7 hours ago

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೈವೋಲ್ಟೇಜ್ ಕ್ಷೇತ್ರ ಅಫಜಲಪುರಕ್ಕೆ ಆಗಮನ

ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ…

8 hours ago

ಲೋಕಸಭಾ ಚುನಾವಣೆ : ಕಾಂಗ್ರೆಸ್​ ಹೊಸ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗೆ ಹಿನ್ನಲೆ ಸಂಬಂಧಿಸಿದಂತೆ ಇಂದು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ…

8 hours ago