Categories: ಮೈಸೂರು

ಸುರಕ್ಷತಾ ಪರಿಶೋಧನಾ ತಂಡದಿOದ ಮೈಸೂರು ಸುರಕ್ಷತೆ ಪರಿಶೀಲನೆ

 ಮೈಸೂರು: ನೈಋತ್ಯ ರೈಲ್ವೆ ಪ್ರಧಾನ ಕಛೇರಿಯಿಂದ ಸುರಕ್ಷತಾ ಪರಿಶೋಧನಾ ತಂಡವು ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದ ಸುರಕ್ಷತೆಯನ್ನು ಶುಕ್ರವಾರ ಪರಿಶೀಲನೆಯನ್ನು ನಡೆಸಿತು.

ರೈಲುಗಳ ಸುರಕ್ಷಿತ ಕಾರ್ಯಾಚರಣೆಗಾಗಿ, ನಿಗದಿತ ನಿಯಮಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾನ್ಯ ನ್ಯೂನತೆಗಳನ್ನು ಗುರುತಿಸಲು, ನೈಋತ್ಯ ರೈಲ್ವೆ ಪ್ರಧಾನ ಕಛೇರಿಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ್ ತಿವಾರಿ ನೇತೃತ್ವದ ರೈಲ್ವೆ ಅಧಿಕಾರಿಗಳ ಬಹು-ಇಲಾಖಾ ತಂಡವು ಎರಡು ದಿನಗಲ ಕಾಲ ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದಲ್ಲಿ ಸುರಕ್ಷತಾ ಆಡಿಟ್ ತಪಾಸಣೆ ನಡೆಸಿತು. ತಂಡವು ವಿದ್ಯುತ್, ಯಾಂತ್ರಿಕ, ಕಾರ್ಯಾಚರಣೆ, ಸುರಕ್ಷತೆ ಮತ್ತು ಸಂವಹನ ಮತ್ತು ದೂರಸಂಪರ್ಕ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡಿತ್ತು.

ತoಡವು ಗುರುವಾರ ಶ್ರೀರಂಗಪಟ್ಟಣದಲ್ಲಿನ ಪ್ರಮುಖ ಮತ್ತು ಸಣ್ಣ ಸೇತುವೆಗಳನ್ನು ಪರಿಶೀಲಿಸಿತು. ಮತ್ತು ಮಾರ್ಗದಲ್ಲಿ ನಾಗನಹಳ್ಳಿ ಹಾಗು ಪಾಂಡವಪುರ ನಿಲ್ದಾಣಗಳಲ್ಲಿನ ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತು ಮೈಸೂರು-ಬೆಂಗಳೂರು ಹಳಿ ದ್ವಿಪಥದ ಮುಖ್ಯ ಮಾರ್ಗದ ಟ್ರಾಕ್ಷನ್, ಉಪ ನಿಲ್ದಾಣಗಳನ್ನು ಸಹ ಪರಿಶೀಲಿಸಿತು.

ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೊoದಿಗೆ ಅಧಿಕಾರಿಗಳು ಮಾತನಾಡಿ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ರಕ್ಷಿಸುವುದರ ಹೊರತಾಗಿ ರೈಲು ಬೇರ್ಪಡುವುದು ಗಮನಕ್ಕೆ ಬಂದಾಗ, ಅವರು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗು ಇತರೆ ನಿಯಮಗಳ ಬಗ್ಗೆ, ಅವರ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂವಾದ ನಡೆಸಿದರು. ನಿಲ್ದಾಣದ ವ್ಯವಸ್ಥಾಪಕರುಗಳ ತಪಾಸಣಾ ವೇಳಾಪಟ್ಟಿಯನ್ನು ಮತ್ತು ಅವರು ನಿರ್ವಹಿಸಬೇಕಾದ ಇತರ ಪ್ರಮುಖ ದಾಖಲೆ ಪುಸ್ತಕಗಳನ್ನು ತಂಡವು ಪರಿಶೀಲಿಸಿತು.

ಮೈಸೂರಿನಲ್ಲಿ ಇಂದು ಮೈಸೂರು ನಿಲ್ದಾಣದ ಪಿಟ್‌ಲೈನ್‌ಗಳು, ಎಲೆಕ್ಟಿçಕಲ್ ಇಂಟರ್‌ಲಾಕಿoಗ್, ಯಾರ್ಡ್, ಕೋಚಿಂಗ್ ಡಿಪೋ, ಸಿಬ್ಬಂದಿ ಅಂಗಳ ಮತ್ತು ಚಾಲನಾ ಸಿಬ್ಬಂದಿ ಕೊಠಡಿಯ ಎಲ್ಲಾ ಸುರಕ್ಷತಾ ಮಾನದಂಡಗಳ ಮತ್ತು ಅವುಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತೀವ್ರ ತಪಾಸಣೆ ನಡೆಸಲಾಯಿತು.

ನಂತರ ತಿವಾರಿ ಅಧ್ಯಕ್ಷತೆಯಲ್ಲಿ ಇರ್ವಿನ್ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಸಭಾಂಗಣದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರೊಂದಿಗೆ ಸುರಕ್ಷತಾ ವಿಚಾರ ಸಂಕಿರಣವನ್ನು ಸಹ ನಡೆಸಲಾಯಿತು. ಸೆಮಿನಾರ್‌ನಲ್ಲಿ ಮುಖ್ಯ ಎಲೆಕ್ಟಿçಕಲ್ ಜನರಲ್ ಇಂಜಿನಿಯರ್ ಆರ್.ಕೆ.ಶರ್ಮಾ, ಮುಖ್ಯ ಸಂಚಾರ ಯೋಜನಾ ವ್ಯವಸ್ಥಾಪಕ ಎಚ್.ಎಂ.ದಿನೇಶ್, ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್.ಶರ್ಮಾ ನೈಋತ್ಯ ರೈಲ್ವೆ ಮುಖ್ಯ ಜನರಲ್ ಇಂಜಿನಿಯರ್ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

Sneha Gowda

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

5 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

5 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

5 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

6 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

7 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

7 hours ago