Categories: ಮೈಸೂರು

ಸುತ್ತೂರಿನಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ

ನಂಜನಗೂಡು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಶ್ವರ ಜಾತ್ರೆಯು  ಮಹಾಮಾರಿ ಕೊರೋನಾ ವೈರಸ್ ಹರಡುವ ಕಾರಣ  ಸರಳವಾಗಿ ಭಾನುವಾರ ನಡೆಯಿತು. ಶ್ರೀಮಠದ  ಅವರಣದಲ್ಲಿ ಬೆಳ್ಳಿ ರಥಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ 100 ರಿಂದ 150  ಮಠದ ಭಕ್ತಾಧಿಗಳು ಮಾತ್ರ ಜಾತ್ರೆಯಲ್ಲಿ ಪಾಲ್ಗೊಂಡಿದ್ದು  ಬೆಳ್ಳಿರಥ ಶ್ರೀಮಠದ ಅವರಣದಲ್ಲಿ ಒಂದು ಗಂಟೆಗೆ  ಸೀಮಿತವಾಗಿ  ಒಂದು ಗಂಟೆ  ಸಮಯದಲ್ಲಿ ದೇವಸ್ಥಾನ ಸುತ್ತ ಪ್ರದಕ್ಷಿಣೆ ಮಾಡಿ ಮಠದ ಒಳಗೆ ಶಿವರಾತ್ರಿಶ್ವರ ಮೂರ್ತಿಯನ್ನು ಮತ್ತೆ ಮೂಲ ಮಟ್ಟಕ್ಕೆ ತಲುಪಿಸಿದರು.

ಈ ಸಂದರ್ಭದಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದ ಗುರುಕುಲದ ಸ್ವಾಮಿಗಳು ಮಾತ್ರ ಆಗಮಿಸಿ ಜಾತ್ರೆಯನ್ನು ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಜೆಎಸ್ಎಸ್  ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾಗೂ ಯಳಂದೂರು ತಾಲ್ಲೂಕು ದುಗ್ಗಟ್ಟಿ ಸುಂದರಮ್ಮ,  ವೀರಭದ್ರಪ್ಪ ಅವರ ಪ್ರತಿಷ್ಠಾನದ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಗತಿಪರ ರೈತರು ಅತ್ಯುತ್ತಮವಾಗಿ ಬೆಳೆ ಬೆಳೆದ ರೈತರಿಗೆ ಪ್ರಶಸ್ತಿ ನೀಡಿ ಸುತ್ತೂರು ದೇಶೀಕೇಂದ್ರ ಸ್ವಾಮೀಜಿ ಅವರು ಸನ್ಮಾನಿಸಿದರು.

ಈ ವೇಳೆ ದುಗ್ಗಟ್ಟಿ ವೀರಭದ್ರಪ್ಪ ಗಂಗಾಧರಸ್ವಾಮಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪ್ರಗತಿಪರ ರೈತರು ಹಾಜರಿದ್ದರು.

ಪ್ರತಿವರ್ಷವೂ ಸುತ್ತೂರು ಜಾತ್ರೆಗೆ ಲಕ್ಷಾಂತರ ಭಕ್ತರ ಮಂದಿಗಳು ಸಾವಿರಾರು ಕಿಲೋಮೀಟರ್ ಗಳಿಂದ  ಸಾವಿರಾರು ಗ್ರಾಮಗಳಿಂದ, ವಿವಿಧ  ಜಿಲ್ಲೆಗಳಿಂದ, ಅಲ್ಲದೆ ಹೊರ ದೇಶಗಳಿಂದಲೂ ಸುತ್ತೂರು ಜಾತ್ರೆಗೆ ಬಂದು ಒಂದು ವಾರ ಕಾಲ ದಿನನಿತ್ಯವೂ ಜನಪರ ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸಿ ಅಲ್ಲದೆ ಶ್ರೀಮಠದ ಸಮೀಪವೂ ಕಪಿಲಾ ನದಿಯು ತುಂಬಿ ಹರಿಯುವುದನ್ನು ಕಣ್ತುಂಬಿಸಿಕೊಳ್ಳುತ್ತಿದ್ದರು.

ಜಾತ್ರೆಯಲ್ಲಿ ಪ್ರತಿದಿನವೂ ಲಕ್ಷಾಂತರ ಮಂದಿಗೆ ಅನ್ನದಾಸೋಹ, ಕೃಷಿ ಮೇಳ, ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಕೃಷಿ ಮೇಳ, ವಸ್ತು ಪ್ರದರ್ಶನ, ಕ್ರೀಡಾಕೂಟ, ದನಗಳ ಜಾತ್ರೆ, ಕೆಸರುಗದ್ದೆ ಓಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ ಮೇಳ ನಡೆಯುತ್ತಿದ್ದವು. ಮಹಾಮಾರಿ ಕೊರೋನ ದಿಂದ ಸರಳವಾಗಿ  ನಡೆದ ಈ ಬಾರಿಯ ಜಾತ್ರೆಯು ನಾಡಿನ ಲಕ್ಷಾಂತರ ಭಕ್ತಾಧಿಗಳಿಗೆ ನಿರಾಸೆ  ಉಂಟು ಮಾಡಿದೆ.

Sneha Gowda

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

3 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

3 hours ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

3 hours ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

3 hours ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

4 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

4 hours ago