Categories: ಮೈಸೂರು

ಸಿ.ಟಿ.ರವಿ ಕೊಲೆಗಡುಕ,ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಲಕ್ಷ್ಮಣ್‌ ಟೀಕೆ

ಮೈಸೂರು: ಸಿ.ಟಿ.ರವಿ ಒಬ್ಬ ಕೊಲೆಗಡುಕ. ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ಮದ್ರಾಸ್‌ನಲ್ಲಿ ತಲೆಮರೆಸಿಕೊಂಡಿದ್ದ. ಇಂತಹವರು ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಹರಿಹಾಯ್ದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಮೋಸ ಮಾಡುತ್ತಿದೆ. ಬಿಜೆಪಿ ನಾಯಕ ಸಿ.ಟಿ.ರವಿಗೆ ನಾಚಿಕೆಯಾಗಬೇಕು. ಮೇಕೆದಾಟು ವಿಚಾರದಲ್ಲಿ ಬಿಜೆಪಿಯವರದ್ದು ದ್ವಂದ್ವ ನಿಲುವು. ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನು ಕಾಂಗ್ರೆಸ್ ಮೇಲೆ ತೋರಿಸುತ್ತಿದ್ದಾರೆ. ಇವರಿಗೇನಾದರೂ ಸಂಸ್ಕೃತಿ, ಕಾಮನ್ಸೆಸ್ಸ್ ಇದೆಯಾ? ಈಶ್ವರಪ್ಪನವರಿಗೆ ಮಾನ ಮರ್ಯಾದೆ ಇದೆಯಾ ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯದಲ್ಲಿ ಸೈಟ್ ಖರೀದಿಸಿದ್ದಾರೆ. 4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದೀರಿ, ಅದರಲ್ಲಿ ಏನು ಮಾಡ್ತಿದ್ದೀರಿ? ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ? ಇದರ ಒಟ್ಟು ಬೆಲೆ ಎಷ್ಟು? ಇಡಿ, ಐಟಿ ಯಾಕೆ ಇವರ ಬಗ್ಗೆ ಏಕೆ ತನಿಖೆ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ ಎಂದು ಪ್ರಶ್ನಿಸಿದರು. ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ. ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ. ಯಾವ ರೀತಿ ತನಿಖೆ ಮಾಡುತ್ತಾರೋ ನೋಡುತ್ತೇವೆ. ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತನಾಡುವುದನ್ನು ಬಿಡಲಿ ಎಂದು ವಾಗ್ದಾಳಿ ನಡೆಸಿದರು.

Indresh KC

Recent Posts

ಮೋದಿ ಕೇವಲ ಮತಗಳಿಕೆಗಾಗಿ ಭಾವನಾತ್ಮಕ ಸುಳ್ಳು ಹೇಳುತ್ತಾರೆ: ಸಿಎಂ ಆರೋಪ

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುಸ್ಥಾನ…

10 mins ago

ನಾವು ದಾಖಲೆ ಕಳಿಸುವುದಿಲ್ಲ, ನೇರವಾಗಿ ದಾಳಿ ಮಾಡುತ್ತೇವೆ: ಪ್ರಧಾನಿ ಮೋದಿ

ಕಾಂಗ್ರೆಸ್‌ ಅವಧಿಯಲ್ಲಿದ್ದ ಪದ್ಧತಿಯಂತೆ ಮುಂಬೈ ದಾಳಿಯ ಬಳಿಕ ನಾವು ಪಾಕಿಸ್ತಾನಕ್ಕೆ ದಾಖಲೆಗಳನ್ನು ಕಳಿಸುವುದಿಲ್ಲ, ಬದಲಿಗೆ ಭಯೋತ್ಪಾದಕರ ಮೇಲೆ ನೇರವಾಗಿ ದಾಳಿ…

45 mins ago

ಟಿ20 ವಿಶ್ವಕಪ್‌ : ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ

ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ…

57 mins ago

ಟಿ20 ವಿಶ್ವಕಪ್‌ : ಕೆ.ಎಲ್‌. ರಾಹುಲ್‌ಗೆ ಇಲ್ಲ ಅವಕಾಶ

ಇಂದು ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ 15 ಸದಸ್ಯರ ಬಳಗದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ತಂಡವನ್ನು…

1 hour ago

ರಾಜು ಆಲಗೂರರಿಗೆ ‘ಶುಭ’ತಂದ ಮಂಗಳ ಮುಖಿಯರು

ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಾರ್ಯಾಲಯ ಕಳೆಗಟ್ಟಿತ್ತು. ಇದಕ್ಕೆ ಕಾರಣ, ಮಂಗಳ ಮುಖಿಯರ ನಗು ಮೊಗದ ಕಲರವ. ಹೌದು, ಅವರೆಲ್ಲ ಕಾಂಗ್ರೆಸ್…

2 hours ago

ಟಿ20 ವಿಶ್ವಕಪ್​​: ಟೀಮ್​ ಇಂಡಿಯಾದಲ್ಲಿ ದಿನೇಶ್​ ಕಾರ್ತಿಕ್​ಗೆ ಇಲ್ಲ ಸ್ಥಾನ !

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು…

2 hours ago