ಮೈಸೂರು

ರಾಜ್ಯ ಮತ್ತು ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು; ರಿಷಿ ಕುಮಾರ ಸ್ವಾಮೀಜಿ

ಮೈಸೂರು : ಕರ್ನಾಟಕದ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಹಿಜಾಬ್ ಧರಿಸುವ ವಿಚಾರದ ವಿವಾದ ಇನ್ನೂ ಮುಂದಿರುವಾಗಲೇ ರಾಜ್ಯ ಮತ್ತು ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂದು ಮೈಸೂರಿನಲ್ಲಿ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ, ದೇಶ ಮತ್ತು ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಮಾಡಬೇಕು. ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ, ಅವರ ಅಕ್ಕ ತಂಗಿ ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ? ಶಾಲೆಯ ಶಿಕ್ಷಕರು ತಂದೆ-ತಾಯಿಯಂತೆ ಇರುತ್ತಾರೆ. ಸಹಪಾಠಿಗಳು ಸಹೋದರರಂತೆ ಇರುತ್ತಾರೆ. ಅವರನ್ನು ಅನುಮಾನಿಸದರೆ ಹೇಗೆ? ಎಂದು ರಿಷಿ ಕುಮಾರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ದೇವಸ್ಥಾನ ಕಟ್ಟಬೇಕು ಹೇಳಿಕೆಗೆ ಈಗಲೂ ಬದ್ದ: ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ಆ ಜಾಗದಲ್ಲಿ ಹನುಮ ದೇವಸ್ಥಾನ ಕಟ್ಟಬೇಕು ಎಂಬ ನನ್ನ ಈ ಹಿಂದಿನ ಹೇಳಿಕೆಗೆ ನಾನು ಈಗಲೂ ಬದ್ದ. ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಇದೆ ವೇಳೆ ಒತ್ತಾಯ ಮಾಡಿದ್ದಾರೆ. ಇದು ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ. ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ. ಗುಂಪಿನ ಜೊತೆ ಹೋಗುವುದಿಲ್ಲ. ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ ಎಂದೂ ಅವರು ಹೇಳಿದ್ದಾರೆ.

ಇನ್ನು, ಆಜಾನ್ ಕೂಗುವ ಲೌಡ್ ಸ್ಪೀಕರ್‌ಗಳನ್ನು ತೆಗೆದು ಹಾಕಬೇಕು. ಈ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ‘ಕೈ ಕಡಿಯುತ್ತೇವೆ ಕಾಲು ಕಡಿಯುತ್ತೇನೆ’ ಎಂಬ ನಿಮ್ಮ ಬೆದರಿಕೆಗೆ ಹೆದರುವುದಿಲ್ಲ. ಈ ರೀತಿ ಹೇಳುವುದು ಪ್ರಚೋದನೆಯಾದೀತು. ರಾಜ್ಯ ಸರ್ಕಾರವು ದೇವಸ್ಥಾನ ಒಡೆದು‌ ಮಸೀದಿ ಕಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೇಗುಲಗಳನ್ನು ನಾವು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ನಮಗೆ ರಕ್ಷಣೆ ಕೊಡಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಆಗ್ರಹಿಸಿದರು.

Gayathri SG

Recent Posts

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ಟಿಶ್ಯೂ ಪೇಪರ್‌ನಲ್ಲಿತ್ತು ಸಂದೇಶ

ಶಾಲೆಗಳ ಬಾಂಬ್‌ ಬೆದರಿಕೆ ಬೆನ್ನಲ್ಲೆ ಇದೀಗ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಬೆದರಿಕೆ ಹಾಕಲಾಗಿದ್ದು ಟಾಯ್ಲೆಟ್​ನಲ್ಲಿದ್ದ ಟಿಶ್ಯೂ ಪೇಪರ್‌ನಲ್ಲಿ ಬೆದರಿಕೆ…

30 mins ago

ಸಾಕು ನಾಯಿ ವಿಚಾರಕ್ಕೆ ಮಾಲೀಕನಿಗೆ ಐವರಿಂದ ಹಲ್ಲೆ: ಆರೋಪಿಗಳು ಅರೆಸ್ಟ್‌

ಸಾಕು ನಾಯಿ ವಿಚಾರಕ್ಕೆ ಏಕಾಏಕಿ ಐವರು ನಾಯಿ ಮತ್ತು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ…

57 mins ago

ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು: ಫ್ಯಾನ್ಸ್​ ಶಾಕ್!

ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು.…

1 hour ago

ಬಾತ್​ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ !

ನಗರದಲ್ಲಿ​ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. 21 ವರ್ಷ ವಯಸ್ಸಿನ ಪ್ರಭುದ್ಧ ಎಂಬ ಯುವತಿ ಸಾವನ್ನಪ್ಪಿದ್ದಾಳೆ.

2 hours ago

ಅಂಜಲಿ‌ ಕೊಲೆ‌ ಕೇಸ್‌ ನಲ್ಲಿ ಕರ್ತವ್ಯ ಲೋಪ : ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಅಂಜಲಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ, ಬೆಂಡಿಗೇರಿ ಪೊಲೀಸ್‌ ಇನ್ಸ್‌ಪೆಕ್ಟರ್ ಸೇರಿ ಓರ್ವ ಸಿಬ್ಬಂದಿಯನ್ನು ಪೊಲೀಸ್ ಕಮೀಷನ‌ರ್ ಅಮಾನತು ಮಾಡಿ ಆದೇಶ…

2 hours ago

ಮಹತ್ವದ ತೀರ್ಪಿನಲ್ಲಿ ಇಡಿ ಕಾರ್ಯಗಳಿಗೆ ಕಡಿವಾಣ ಹೇರಿದ ಸುಪ್ರೀಂ ಕೋರ್ಟ್‌ !

ಅತ್ಯಂತ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯದ ಕಾರ್ಯಗಳಿಗೆ ಕಡಿವಾಣ ಹೇರಿದೆ. ಯಾವುದೇ ವ್ಯಕ್ತಿ ವಿರುದ್ಧ ದಾಖಲಾದ ಅಕ್ರಮ…

2 hours ago