Categories: ಮೈಸೂರು

ಮೈಸೂರು: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ

ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಸೀಹಳ್ಳಿ ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನವಾದ ಘಟನೆ ಮೈಸೂರು  ನಡೆದಿದೆ.

ಸೋಮಶೇಖರಪ್ಪ(53) ಮೃತಪಟ್ಟವರು ಎಂದು ಹೇಳಲಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿ ತಗುಲಿದೆ ಎನ್ನಲಾಗಿದ್ದು, ಬೆಂಕಿಯ ಜ್ವಾಲೆ ಇಡೀ ಮನೆಗೆ ವ್ಯಾಪಿಸಿ ಸೋಮಶೇಖರಪ್ಪ ಸಜೀವ ದಹನವಾಗಿದ್ದಾರೆ.

ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಟಿ. ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Swathi MG

Recent Posts

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

7 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

24 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

32 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

51 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

9 hours ago