ಮೈಸೂರು

ಮೈಸೂರಿನ ಮೃಗಾಲಯದಲ್ಲಿ ಪ್ರವಾಸಿಗರ ಗಮನ ಸೆಳೆಯುತ್ತಿರುವ ಗೊರಿಲ್ಲಾಗಳು

ಮೈಸೂರು: ಜರ್ಮನಿ ಮೃಗಾಲಯದಿಂದ ತರಿಸಿಕೊಳ್ಳಲಾಗಿರುವ ಎರಡು ಗಂಡು ಗೊರಿಲ್ಲಾಗಳನ್ನು ಇನ್ನು ಮುಂದೆ ನಗರದ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರು ನೋಡಬಹುದಾಗಿದೆ. ಮಂಗಳವಾರ ಬೆಂಗಳೂರಿನ ಮೃಗಾಲಯದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿದ್ದು, ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಗೊರಿಲ್ಲಾಗಳಾದ ತಬೊ (14 ವರ್ಷ) ಮತ್ತು ಡೆಂಬ(8 ವರ್ಷ) ಎಂಬ ಹೆಸರಿನ ಎರಡು ಗಂಡು ಗೊರಿಲ್ಲಾಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಇದರಿಂದ ಮೃಗಾಲಯಕ್ಕೆ ಮತ್ತೊಂದು ಗರಿಮೆ ಬಂದಂತಾಗಿದೆ. ಪೋಲೊ ಗೋರಿಲ್ಲಾ 2014ರಲ್ಲಿ ವೃದ್ಧಾಪ್ಯದಿಂದ ಸಾವನ್ನಪ್ಪಿದ ನಂತರ ಗೊರಿಲ್ಲಾವನ್ನು ಮೃಗಾಲಯಕ್ಕೆ ತರಲು ಸತತ ಪ್ರಯತ್ನ ನಡೆಸಿದ ಫಲವಾಗಿ ಆ.19ರಂದು ಜರ್ಮನಿಯಿಂದ ಎರಡು ಗಂಡು ಗೊರಿಲ್ಲಾಗಳನ್ನು ತರಲಾಗಿತ್ತು. ನೂತನ ಅತಿಥಿಗಳು ಸೇರಿ ಮೈಸೂರು ಮೃಗಾಲಯದಲ್ಲಿ 145ಕ್ಕೂ ಹೆಚ್ಚು ಜಾತಿಯ ಒಟ್ಟು 1450ಕ್ಕಿಂತ ಹೆಚ್ಚು ಸಂಖ್ಯೆಯ ಪ್ರಾಣಿಗಳಿವೆ. ಮೈಸೂರು ಮೃಗಾಲಯಕ್ಕೆ ವರ್ಷಕ್ಕೆ(2020 ಮತ್ತು 2021ನೇ ವರ್ಷ ಹೊರತುಪಡಿಸಿ) ಸುಮಾರು 30ರಿಂದ 35 ಲಕ್ಷ ವೀಕ್ಷಕರು ಭೇಟಿ ನೀಡುತ್ತಿದ್ದು, ವಿಶ್ವ ಮಟ್ಟದಲ್ಲಿಯೇ ಮನ್ನಣೆ ಗಳಿಸಿದೆ.

ಮೃಗಾಲಯದಲ್ಲಿ ಗೊರಿಲ್ಲಗಳಿಗೆ ಮೊದಲಿದ್ದ ಆವರಣ ವಿಶ್ವ ಮಟ್ಟದ ವಿನ್ಯಾಸದಿಂದ ಕೂಡಿರಲಿಲ್ಲ. ಇನ್ಛೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರ ಸಿಎಸ್‌ಆರ್ ಸ್ಕೀಮ್ ಅಡಿಯಲ್ಲಿ 2.70 ಕೋಟಿ ರೂ. ವಿನಿಯೋಗಿಸಿ ನವೀನ ಗೊರಿಲ್ಲಾ ಪ್ರಾಣಿ ಮನೆಯನ್ನು ನಿರ್ಮಿಸಲಾಗಿದೆ. ಕುಟುಂಬ ಗುಂಪಿನ ಗೊರಿಲ್ಲಾಗಳ ಮನೆ ನಿರ್ಮಾಣಕ್ಕಾಗಿಯು ಸುಮಾರು 3.6 ಕೋಟಿಗಳನ್ನು ಸಿಎಸ್‌ಆರ್ ಸ್ಕೀಂ ಅಡಿಯಲ್ಲಿ ನೀಡಲು ಒಪ್ಪಿದ್ದು, ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಗೊರಿಲ್ಲಾಗಳ ಮನೆಯ ಆಧುನಿಕ ವಿನ್ಯಾಸವನ್ನು ಪೋಲೆಂಡ್ ದೇಶದ ನಾಡಿಯ ರಿಲೇ ಮಾಡಿಕೊಟ್ಟಿದ್ದಾರೆ. ತಬೊ ಮತ್ತು ಡೆಂಬ ಗೊರಿಲ್ಲಾಗಳು ಪಶ್ಚಿಮ ತಗ್ಗುಪ್ರದೇಶದ ಗೋರಿಲ್ಲಾಗಳಾಗಿದ್ದು, ಸ್ಥಳೀಯ ಜೀವ ವೈವಿಧ್ಯತೆಯಲ್ಲಿ ಗೊರಿಲ್ಲಾಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅರಣ್ಯ ಪ್ರದೇಶದಲ್ಲಿ ಇವುಗಳ ಜೀವಿತಾವಧಿ 35 ವರ್ಷ. ಆದರೆ, ಮೃಗಾಲಯದಲ್ಲಿ 60 ವರ್ಷ ಜೀವಿಸುತ್ತವೆ.

ಯುರೋಪಿಯನ್ ಅಸೋಸಿಯೇಷನ್ ಆಫ್ ಜೂಸ್ ಅಂಡ್ ಅಕ್ವೇರಿಯಂ ಸಂಸ್ಥೆಯ ಮೂಲಕ ಯುರೋಪಿಯನ್ ಎಂಡೆಜಾರ್ಡ್ ಸ್ಪೆಷಯಾಸ್ ಪ್ರೋಗ್ರಾಮ್ ಅಡಿಯಲ್ಲಿ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾಗಳನ್ನು ಮತ್ತೆ ಪಡೆಯಲಾಗಿದೆ. ಪ್ರಸ್ತುತ, ನಮ್ಮ ದೇಶದಲ್ಲಿ ಗೊರಿಲ್ಲಾ, ಒರಾಂಗುಟಾನ್, ಆಫ್ರಿಕಾದ ಗೆಂಡಾಮೃಗ ಮತ್ತು ಆಫ್ರಿಕಾದ ಚೀತಾ ಮೈಸೂರು ಮೃಗಾಲಯದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ.

Gayathri SG

Recent Posts

ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

  ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16…

28 mins ago

‘ಜೆಟ್ ಏರ್ವೇಸ್’ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ

ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

32 mins ago

ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೆದರಿಸಲು ಹೋಗಿ ಜಿಮ್​​ ಟ್ರೈನರ್ ಸಾವು

ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ…

43 mins ago

ಟಿ 20 ವಿಶ್ವಕಪ್​​ನಲ್ಲಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ ಕೆಎಮ್​ಫ್​

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಎಮ್​ಫ್​ (ಕರ್ನಾಟಕ ಹಾಲು ಮಹಾಮಂಡಳಿ) ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ.

1 hour ago

ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ…

1 hour ago

ಲಾರಿಗೆ ಬಸ್‌ ಡಿಕ್ಕಿ : 4 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಓವರ್​ಟೇಕ್​ ಮಾಡುವ ಭರದಲ್ಲಿ ಪ್ರಯಾಣಿಕರಿದ್ದ ಬಸ್​ವೊಂದು​ ಲಾರಿಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈ-ತಿರುಚಿ ಹೆದ್ದಾರಿಯಲ್ಲಿ ಇಂದು ನಡೆದಿದೆ.ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.…

2 hours ago