Categories: ಮೈಸೂರು

ಮೈಸೂರಿನಲ್ಲಿ ರಕ್ತದಾನ ಮಾಡಿ ಗಮನಸೆಳೆದ ಪ್ರೇಮಿಗಳು

ಮೈಸೂರು : ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಿಗಳು ಹಲವು ರೀತಿಯಲ್ಲಿ ಆಚರಣೆ ಮಾಡಿದರೂ ಮೈಸೂರಿನಲ್ಲಿ ಮಾತ್ರ ಪ್ರೇಮಿಗಳು ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ.

ವಿಶ್ವ ಪ್ರೇಮಿಗಳ ದಿನಾಚರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತಸಂಬಂಧಿ ಬಳಗವು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಪ್ರೇಮಿಗಳ ಜೋಡಿ ಭಾಗವಹಿಸಿ ರಕ್ತದಾನ ಮಾಡಿ ಗಮನಸೆಳೆದರು.

ಈ ವೇಳೆ ಪ್ರೇಮಿಗಳಲ್ಲಿ ಒಬ್ಬರಾದ ವರಲಕ್ಷ್ಮಿ ಅಜಯ್ ಮಾತನಾಡಿ ನಮ್ಮ‌ ರಕ್ತಸಂಬಂಧಿ ತಂಡದಲ್ಲಿ ನಾವೆಲ್ಲರೂ ಪ್ರೀತಿಸಿ ಪೋಷಕರನ್ನು ಒಪ್ಪಿಸಿ ಮದುವೆಯಾದವರು. ಕಳೆದ ಆರೇಳು ವರ್ಷಗಳಿಂದ ಪ್ರೇಮಿಗಳ ದಿನಾಚರಣೆಯನ್ನು ಸಡಗರದಿಂದ ಆಚರಿಸುತ್ತಿದ್ದೆವು. ಆದರೆ 2019ರಲ್ಲಿ ಪ್ರೇಮಿಗಳ ದಿನಾಚರಣೆಯಂದೇ ಪುಲ್ವಾಮದಲ್ಲಿ ನಮ್ಮ‌ ಭಾರತೀಯ ಸೈನಿಕರ ಹತ್ಯೆ ನಡೆದದ್ದು ಇಡೀ ದೇಶ ದುಃಖದ ಮಡಿಲಲ್ಲಿತ್ತು. ನಮಗೂ ಸಹ ಬೇಸರ ತರಿಸಿತು, ಅದರಿಂದ ಮನನೊಂದು ನಮ್ಮ ರಕ್ತಸಂಬಂಧಿ ತಂಡ ಪ್ರತಿವರ್ಷ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸದೇ ಸಾಮಾಜಿಕ ಕಳಕಳಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ಕೋವಿಡ್ ಸಂದರ್ಭದಲ್ಲಿ ಅನ್ನದಾಸೋಹ ರಕ್ತದಾನ ಸೇವಾ ಕಾರ್ಯಕ್ರಮ ಆಚರಿಸಲು ಮಂದಾಗಿದ್ದೇವೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸರಸ್ವತಿ ಪ್ರಸಾದ್ ಮಾತನಾಡಿ ಅಪಘಾತ, ಹೆರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ರಕ್ತದ ಶೇಖರಣೆ ಕುಸಿಯದ ಹಾಗೆ ಕಾಪಾಡಿಕೊಳ್ಳಬೇಕು ಎಂದರೆ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯುವಕರು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ಒಬ್ಬರ ರಕ್ತದಾನದಿಂದ ಏಕಕಾಲಕ್ಕೆ ಮೂವರ ರೋಗಿಗಳ ಜೀವ ಉಳಿಸಬಹುದು. ಆರೋಗ್ಯ ಇಲಾಖೆ ರಕ್ತದಾನದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ರಕ್ತದಾನ ಅರಿವು ಮೂಡಿಸುವ ನಾಮಫಲಕಗಳನ್ನು ಅಳವಡಿಸಲು ಮುಂದಾಗಬೇಕು‌ ಎಂದರು.

ರಕ್ತದಾನ ಶಿಬಿರದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಿಂದುಳಿದ ವರ್ಗಗಳ ಮುಖಂಡ ಸೂರಜ್, ರಕ್ತಸಂಬಂಧಿ ಬಳಗದ ಶೀಲಾ ರವಿ, ಸೌಮ್ಯ ನಾಗೇಂದ್ರ, ಸುಮನ ಮಾದೇಶ್, ವರಲಕ್ಷ್ಮಿ ಅಜಯ್, ಮಧುರ ಶಿವು, ಸರಸ್ವತಿ ಮಹಾಲಿಂಗ, ರಶ್ಮಿ ಧನರಾಜ್, ಸಿಂಧೂ ದೇವರಾಜ್, ಕೋಕಿಲ ಶರತ್, ಗಗನ ಚಂದ್ರು ಮೊದಲಾದವರು ಪಾಲ್ಗೊಂಡು ರಕ್ತದಾನ ಮಾಡಿದರು.

Gayathri SG

Recent Posts

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

10 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

34 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago