Categories: ಮೈಸೂರು

ಮೈಸೂರಿನಲ್ಲಿ ಮಳೆಗೆ ಕುಸಿದ ಪಾರಂಪರಿಕ ಕಟ್ಟಡ

ಮೈಸೂರು: ಅಸಾನಿ ಚಂಡ ಮಾರುತದ ಪರಿಣಾಮ ನಗರದ ಅಗ್ರಹಾರದಲ್ಲಿರುವ ವಾಣಿ ವಿಲಾಸ ಮಾರುಕಟ್ಟೆಯ ಶಿಥಿಲಗೊಂಡಿದ್ದ ಕಟ್ಟಡ ಕುಸಿದು ಬಿದ್ದಿದೆ.

ಗುರುವಾರ ಮಧ್ಯಾಹ್ನ ಸಮಯದಲ್ಲಿ ವಾಣಿ ವಿಲಾಸ ಮಾರುಕಟ್ಟೆಯ ಕಟ್ಟಡದ ಒಂದು ಪಾರ್ಶ್ವದ ಸಜ್ಜಾ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸದಿರುವುದು ನೆಮ್ಮದಿ ತಂದಿದೆ.

ಈ ಕಟ್ಟಡ ಸುಮಾರು 95 ವರ್ಷದ್ದಾಗಿದ್ದು, ವ್ಯಾಪಾರ ಚಟುವಟಿಕೆ ವಿಸ್ತರಣೆಗಾಗಿ ಮೈಸೂರು ಸಂಸ್ಥಾನದ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1927ರಲ್ಲಿ ವಾಣಿ ವಿಲಾಸ ಮಾರುಕಟ್ಟೆ ನಿರ್ಮಿಸಿದ್ದರು. ಆದರೆ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಇತ್ತೀಚಿನ ವರ್ಷಗಳಲ್ಲಿ ಕಟ್ಟಡದ ಹಲವು ಭಾಗಗಳು ಕುಸಿದು ಬಿದ್ದಿದ್ದು ಇದೀಗ ಕಟ್ಟಡದ ಮತ್ತೊಂದು ಭಾಗ ಕುಸಿದು ಬಿದ್ದಿದೆ.

ಈ ಕಟ್ಟಡ ಕುಸಿದಿರುವ ಸ್ಥಳ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿದ್ದು, ಒಂದು ವೇಳೆ ಬಸ್ ನಿಲ್ದಾಣದ ಕಡೆಗೆ ಕುಸಿದು ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಅನಾಹುತ ತಪ್ಪಿದೆ. ಪಾರಂಪರಿಕ ನಗರಿ ಮೈಸೂರಿನ ಅಸ್ಮಿತೆಗಳಲ್ಲಿ ಒಂದಾದ ಪಾರಂಪರಿಕ ಕಟ್ಟಡಗಳು ಸೂಕ್ತ ನಿರ್ವಹಣೆ ಇಲ್ಲದೇ ಒಂದೊಂದಾಗಿ ಕುಸಿದು ಬೀಳುತ್ತಿದೆ.ಇದು ಕುಸಿದು ಬೀಳುತ್ತಿರುವ ಆರನೇ ಕಟ್ಟಡವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದ ಲ್ಯಾನ್ಸ್‌ಡೌನ್ ಕಟ್ಟಡ ೨೦೧೨ರಲ್ಲಿ ಹಾಗೂ 2016ರಲ್ಲಿ ದೇವರಾಜ ಮಾರುಕಟ್ಟೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ನಂತರ 2019ರಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡದ ಸ್ವಾಗತ ಕಮಾನು ಕುಸಿದಿತ್ತು.

2021 ನವೆಂಬರ್‌ನಲ್ಲಿ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆ ಚಾವಣಿ ಕುಸಿದಿತ್ತು. ಇದೇ ವರ್ಷ ನಗರದ ಕೆ.ಆರ್. ಆಸ್ಪತ್ರೆಯ ಕಟ್ಟಡದ ಒಂದು ಭಾಗ ಶಿಥಿಲಗೊಂಡು ಹಾನಿಯಾಗಿತ್ತು. ಈ ಸಾಲಿಗೆ ಮೈಸೂರಿನ ಹೆಮ್ಮೆಯ ದೊಡ್ಡ ಗಡಿಯಾರ ಹಾಗೂ ವಾಣಿ ವಿಲಾಸ ಕಟ್ಟಡ ಸೇರಿದ್ದು, ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

Sneha Gowda

Recent Posts

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

21 mins ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

38 mins ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

50 mins ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

1 hour ago

ಇಂದಿನ ರಾಶಿ ಭವಿಷ್ಯ : ಈ ರಾಶಿಗೆ ಹಣಕಾಸಿನ ಸಮಸ್ಯೆ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ​​ 2024ರ…

1 hour ago

96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ (4ನೇ ಹಂತವು ಇಂದು (ಮೇ 13) 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇಂದು 96…

1 hour ago