Categories: ಮೈಸೂರು

ಪಾರಂಪರಿಕ ನಡಿಗೆಯೊಂದಿಗೆ ವಿಶ್ವ ಪರಂಪರೆ ದಿನಾಚರಣೆ

ಮೈಸೂರು: ವಿಶ್ವ ಪರಂಪರೆ ದಿನಾಚರಣೆ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖಾ  ವತಿಯಿಂದ ಮೈಸೂರಿನ ಪುರಭವನದಿಂದ ಪಾರಂಪರಿಕ ನಡಿಗೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧಕರುಗಳಿಗೆ ಆಯೋಜಿಸಲಾಗಿತ್ತು.

ಸದರಿ ಕಾರ್ಯಕ್ರಮಕ್ಕೆ ಉಪ ನಿರ್ದೇಶಕರು ಪರಂಪರೆ(ಪ್ರ), ರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ನಡಿಗೆಯು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ, ಕ್ಲಾಕ್ ಟವರ್, ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಬನುಮಯ್ಯ ಕಾಲೇಜು, ಮೈಸೂರು ಮಹಾನಗರ ಪಾಲಿಕೆ, ಜಗನ್ ಮೋಹನ ಅರಮನೆ, ಸಂಸ್ಕೃತ ಪಾಠ ಶಾಲಾ, ಕಾಡಾ ಕಛೇರಿ, ಗನ್‌ಹೌಸ್ ಮೂಲಕ ಬಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು.

ಪುರಾತತ್ವ ತಜ್ಞರಾದ ಡಾ.ಎನ್.ಎಸ್.ರಂಗರಾಜು, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ  ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಬಗ್ಗೆ ವಿವರಣೆ ನೀಡುವುದರ ಮೂಲಕ ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರುಗಳಿಗೆ ಅರಿವು ಮೂಡಿಸಿದರು.

Sneha Gowda

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

56 mins ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

1 hour ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

1 hour ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

1 hour ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

2 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

2 hours ago