Categories: ಮೈಸೂರು

ನಂಜನಗೂಡಿನಲ್ಲಿ ಅದ್ಧೂರಿಯಾಗಿ ಜರುಗಿದ ಪಂಚ ಮಹಾರಥೋತ್ಸವ

ನಂಜನಗೂಡು : ದಕ್ಷಿಣ ಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ಮಾ.16ರಂದು ಮುಂಜಾನೆ ಸಂಪ್ರದಾಯದಂತೆ ಅದ‍್ಧೂರಿಯಾಗಿ ನಡೆಯಿತು. ಈ ರಥೋತ್ಸವವನ್ನು ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ನಂಜುಂಡೇಶ್ವರನ ಕೃಪೆಗೆ ಪಾತ್ರರಾದರು.

ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣದಿಂದ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ದೇಗುಲದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷೀತ್, ಶಂಕರ್ ದೀಕ್ಷೀತ್, ವಿಶ್ವನಾಥ್ ದೀಕ್ಷೀತ್, ನೀಲಕಂಠ ದೀಕ್ಷಿತ್ ಸ್ಥಳ ಪುರೋಹಿತ ಶ್ರೀಕಂಠ ಜೋಯಿಸ್, ಸದಾಶಿವು, ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸುವ ಮೂಲಕ ಮುಂಜಾನೆ 3.30 ರ ಮಕರ ಲಗ್ನದಲ್ಲಿ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಅವರು ಪೂಜೆ ಸಲ್ಲಿಸುವ ಮೂಲಕ 5.10 ಗಂಟೆಗೆ ಪಂಚಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಆ ನಂತರ ಭಕ್ತರು ಜೈಕಾರದೊಂದಿಗೆ ಪಂಚರಥಗಳನ್ನು ನಗರದ ರಾಜಬೀದಿಯಲ್ಲಿ ಎಳೆದರು. ಈ ವೇಳೆ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು, ನವವಧುವರರು ಉಘೇ ಶ್ರೀಕಂಠ ಉದ್ಘೋಷದೊಂದಿಗೆ ಜೈಕಾರ ಮೊಳಗಿಸಿದರಲ್ಲದೆ, ಭಕ್ತಿಯಿಂದ ಹೂವು, ಹಣ್ಣು ಎಸೆದು ಹರಕೆ ಸಮರ್ಪಿಸಿದರು. ಬಳಿಕ 6.30ಕ್ಕೆ ರಥಗಳು ಸ್ವಸ್ಥಾನ ತಲುಪಿದವು.

ರಥೋತ್ಸವದ ಅಂಗವಾಗಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿಯಿಡಿ ದೇವಾಲಯದ ಮುಂಭಾಗದಲ್ಲಿ ವಿವಿ‍ಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಬುಧವಾರ ಮುಂಜಾನೆ ಕಪಿಲ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನದ ಆವರಣದಲ್ಲಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಿದರು, ಇನ್ನು ಕೆಲವರು ಮುಡಿ ಅರ್ಪಿಸಿದರು.

ರಥೋತ್ಸವದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಲಾಗಿತ್ತು. ಇನ್ನೊಂದೆಡೆ ಸಂಘ ಸಂಸ್ಥೆಗಳು ಅಲ್ಲಲ್ಲಿ ಭಕ್ತರಿಗೆ ನೀರು, ಮಜ್ಜಿಗೆ, ಮೊಸರನ್ನ, ಸಿಹಿ ಪೊಂಗಲ್, ಪುಳಿಯೋಗರೆ ಹೀಗೆ ಅನ್ನಸಂತರ್ಪಣೆ ನಡೆಸಲಾಯಿತು. ರಥೋತ್ಸವದ ಅಂಗವಾಗಿ ಮಾ.18ರ ಶುಕ್ರವಾರ ಸಂಜೆ ಕಪಿಲಾ ನದಿಯಲ್ಲಿ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದೆ.

Gayathri SG

Recent Posts

ಕುರುಬ ಸಮಾಜದ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಶಿವಕುಮಾರ ನಾಟೀಕಾರಗಿಲ್ಲ

ಕುರುಬ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿರುವ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರಗೆ ಕುರುಬ ಸಮಾಜದ ರಾಜಕಾರಣದ…

7 mins ago

ಕೊರೊನಾ ಸರ್ಟಿಫಿಕೇಟ್​ನಲ್ಲಿ ಪ್ರಧಾನಿ ಮೋದಿ ಫೋಟೋ ದಿಢೀರ್‌ ಮಾಯ !

ಔಷಧಿಗಳ ತಯಾರಿಕಾ Oxford-AstraZeneca ಸಂಸ್ಥೆ ಕೊರೊನಾ ಲಸಿಕೆ ಕೋವಿಶೀಲ್ಡ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ…

18 mins ago

ಬೇಸಿಗೆಯಲ್ಲಿ ದಾಳಿಂಬೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ದಾಳಿಂಬೆ ಹಣ್ಣನ್ನು ಹೆಚ್ಚು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇದು ನಮ್ಮ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡುವುದರಿಂದ…

26 mins ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ: ವಿಶೇಷ ಚೇತನ ರಾಜಶೇಖರ ಮೂರ್ತಿ ಮನೆಗೆ ಅಧಿಕಾರಿಗಳ ಭೇಟಿ

ಸರ್ಕಾರದ ಪಿಂಚಣಿ ನಂಬಿ ದಿಕ್ಕೆಟ್ಟ ವಿಶೇಷ ಚೇತನ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯ ವರದಿ ಮಾಡಿದ…

40 mins ago

‘ಹರಿ ಹರ ವೀರ ಮಲ್ಲು’ ಚಿತ್ರದ ಟೀಸರ್‌ ನಲ್ಲಿ ಅಬ್ಬರಿಸಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟನೆಯ 'ಹರಿ ಹರ ವೀರ ಮಲ್ಲು ಭಾಗ 1ʼಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ.

51 mins ago

ಪ್ರಜ್ವಲ್ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ ಸ್ಫೋಟಕ ಮಾಹಿತಿ ಬಹಿರಂಗ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಇಡೀ ರಾಜ್ಯ, ದೇಶಾದ್ಯಂತ ಸುದ್ದಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾದ…

1 hour ago