Categories: ಮೈಸೂರು

ದೇಶದಲ್ಲಿ 3ನೇ ಅಲೆ ಬಂದರೂ ಸಾವು-ನೋವು ಸಂಭವಿಸಲಿಲ್ಲ : ಸಚಿವ ಡಾ.ಕೆ.ಸುಧಾಕರ್

ಮೈಸೂರು :  ಬೇರೆ ದೇಶಗಳಲ್ಲಿ ಎಲ್ಲಿ ಲಸಿಕೆ ನೀಡಿಲ್ಲವೂ ಅಲ್ಲಿ ಕೋವಿಡ್​ನ ಬೇರೆ ಬೇರೆ ಪ್ರಬೇಧಗಳು ಕಾಣಿಸಿಕೊಳ್ಳುತ್ತಿವೆ. ನಮ್ಮಲ್ಲಿ 3ನೇ ಅಲೆ ಬಂದರೂ ಕೂಡ ಯಾವುದೇ ಸಾವು-ನೋವು ಸಂಭವಿಸಲಿಲ್ಲಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮೈಸೂರಿನಲ್ಲಿ ತಿಳಿಸಿದ್ದಾರೆ.

ಇಂದು ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದರಿಂದ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಆದರೆ, ಜನ ನಿರ್ಲಕ್ಷ್ಯ ಮಾಡದೇ ಸಮಯಕ್ಕೆ ಸರಿಯಾಗಿ ಎರಡನೇ ಹಾಗೂ ಮೂರನೇ ಡೋಸ್(ಬೂಸ್ಟರ್) ಲಸಿಕೆ ಹಾಕಿಸಿಕೊಳ್ಳಿ. ಕೋವಿಡ್ ನಿಯಮ ಪಾಲಿಸಿ ಎಂದರು. ಜೊತೆಗೆ ಕೋವಿಡ್ ಬೇರೆ ದೇಶದಲ್ಲಿ ಇದೆ, ನಮ್ಮಲ್ಲಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು.

ನಮ್ಮ ದೇಶದ ಪ್ರಧಾನಿಯವರ ಬದ್ಧತೆಯೇ ಕಾರಣ. 185 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಜೊತೆಗೆ ನಮ್ಮ ರಾಜ್ಯದಲ್ಲೂ 10.30 ಕೋಟಿಗಿಂತ ಹೆಚ್ಚು ಡೋಸ್ ಲಸಿಕೆ ನೀಡಿದ್ದರಿಂದ 3ನೇ ಅಲೆಯ ಸಂದರ್ಭದಲ್ಲಿ ಸಾವು ನೋವು ಉಂಟಾಗಲಿಲ್ಲ ಎಂದರು.

ಕೇಂದ್ರ ಸರ್ಕಾರದಿಂದ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲೇ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು

ಹಾಗಾಗಿ, ನಾಲ್ಕನೇ ಅಲೆಯಿಂದ ತಪ್ಪಿಸಿಕೊಳ್ಳಲು ಮತ್ತು ಯಾವುದೇ ತೊಂದರೆಯಾಗಬಾರದು ಎಂದರೆ ಕಡ್ಡಾಯವಾಗಿ‌ ಲಸಿಕೆ ಹಾಕಿಸಿಕೊಳ್ಳಿ ಹಾಗೂ ಅಗತ್ಯ ಇರುವ ಕಡೆ, ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿಕೊಳ್ಳಿ ಎಂದರು. ಸದ್ಯ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯವಾದ ವ್ಯವಸ್ಥೆಯನ್ನು ಮಾಡುತ್ತಿದೆ. ಸದ್ಯದಲ್ಲೇ 5-11 ವರ್ಷದ ಮಕ್ಕಳಿಗೂ ಲಸಿಕೆ‌ ನೀಡಲಾಗುವುದು ಎಂದು ತಿಳಿಸಿದರು.

Swathi MG

Recent Posts

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

22 mins ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

46 mins ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

1 hour ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

1 hour ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

1 hour ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

9 hours ago