Categories: ಮೈಸೂರು

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿ.ಎಂ.ಇಬ್ರಾಹಿಂ

ಮೈಸೂರು : ಈಗಾಗಲೇ ಕಾಂಗ್ರೆಸ್‌ನ ಸಖ್ಯ ಕಳೆದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ತಮ್ಮ ಆಕ್ರೋಶವನ್ನು ಹೊರಹಾಕುವುದರೊಂದಿಗೆ ಫೆ.14ರಂದು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.21ರಷ್ಟು ಮಂದಿ ಅಲ್ಪಸಂಖ್ಯಾತರಿದ್ದೇವೆ. ನಾವು ಇವರನ್ನು ಆಯ್ಕೆ ಮಾಡುವುದು. ಆದರೆ ಸ್ಥಾನ ಕೊಡುವಾಗ ಮಾತ್ರ ನಾವು ಇರುವುದಿಲ್ಲ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನನ್ನ ಹೆಸರೇ ಶಿಫಾರಸ್ಸಾಗಿದ್ದರೂ, ರಾತ್ರೋ ರಾತ್ರಿ ಹೆಸರು ಬದಲಾಗಿದೆ. ಇಬ್ರಾಹಿಂಗೆ ಅನ್ಯಾಯವಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಹೀರೋ ಆಗುತ್ತಿದ್ದರು. ಆದರೆ ಸಿದ್ದರಾಮಯ್ಯ ಹಾಗೆ ಮಾಡಲಿಲ್ಲ. ಕಾಂಗ್ರೆಸ್‌ನಲ್ಲಿ ಅವರು ಅಸಹಾಯಕರಾಗಿದ್ದಾರೆ. ಇನ್ನು ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ಗೆ ಮತ ಹಾಕುವ ಮಿಷನ್ ಎಂದುಕೊಂಡಿದ್ದಾರೆ. ಆಯ್ಕೆ ಮಾಡಲು ನಾವು ಬೇಕು. ಸ್ಥಾನಮಾನ ನೀಡುವಾಗ ನಾವು ಬೇಡವೆ ಎಂದು ಕೇಳಿದರು.

ಯು ಟಿ ಖಾದರ್‌ಗೆ ಉಪ ನಾಯಕ ಸ್ಥಾನ ನೀಡಿದ್ದಾರೆ. ಅಂದರೆ ಪ್ಯಾಂಟ್ ಅಲ್ಲ, ಚಡ್ಡಿ ಕೊಟ್ಟಿದ್ದಾರೆ ಏಕೆಂದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರಾಜ್ಯದಿಂದ ಕಳುಹಿಸಿಕೊಟ್ಟ ಹೆಸರಿನವರನ್ನೇ ಮಾಡಿದ್ದೇವೆ ಎಂದಿದ್ದಾರೆ. ಆದರೆ ನನ್ನ ಹೆಸರೂ ಹೋಗಿತ್ತು. ರಾತ್ರೋರಾತ್ರಿ ಬದಲಾಗಿದ್ದು ಹೇಗೆ? ನಮಗೆ ಏಕೆ ಕೊಡಲಿಲ್ಲ ಎಂದು ಗೊತ್ತಿಲ್ಲ. ಒಂದು ನನ್ನ ಬಳಿ ಹಣಕಾಸು ಇಲ್ಲ. ಇನ್ನೊಂದು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕೊಡದಿರಬಹುದು. ಅಲ್ಪಸಂಖ್ಯಾತರು ಕಾಂಗ್ರೆಸ್ ಬಿಟ್ಟರೆ ಬಿಜೆಪಿಗೆ ವೋಟ್ ಹಾಕುವುದಿಲ್ಲ. ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ ಎಂಬ ಮನಸ್ಥಿತಿ ಇದೆ. ಹೀಗಾಗಿ ಖಾದರ್‌ಗೆ ಉಪ ನಾಯಕ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.

ಮಾತಿನುದ್ದಕ್ಕೂ ಸಿದ್ದರಾಮಯ್ಯರ ಮೇಲೆ ಹರಿಹಾಯ್ದ ಅವರು, ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದಾಗ ನಾನು, ಎಚ್.ವಿಶ್ವನಾಥ್ ಮತ್ತು ರಮೇಶ್‌ಕುಮಾರ್ ಅವರು ಕ್ಷೀರಭಾಗ್ಯ, ಅನ್ನಭಾಗ್ಯ ಘೋಷಣೆ ಮಾಡುವಂತೆ ಸಲಹೆ ನೀಡಿದೆವು. ಬೇಕಿದ್ದರೆ ವಿಶ್ವನಾಥ್ ಜೀವಂತವಾಗಿದ್ದಾರೆ, ಕೇಳಿಕೊಳ್ಳಲಿ. ನಾವು ಹಿನ್ನೆಲೆ ಗಾಯಕರು, ಅವರು ಮುಂಚೂಣಿ ಗಾಯಕರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದೆವು. ಅಂದು ಕೈಬಿಟ್ಟಿದ್ದರೆ ಸಿದ್ದರಾಮಯ್ಯ ಕತೆ ಮುಗಿದೇ ಹೋಗುತ್ತಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲುತ್ತೀರಿ ಬೇಡ ಎಂದೆವು. ಆದರೆ 30ರಿಂದ 40 ಸಾವಿರ ಮತಗಳಿಂದ ಗೆಲ್ಲುವುದಾಗಿ ವಾದಿಸಿದರು. ನಾವು ಅವರನ್ನು ಹೊತ್ತೊಯ್ದು ಬಾದಾಮಿಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದಾಗಿ ಹೇಳಿದರು.

Gayathri SG

Recent Posts

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ.…

23 mins ago

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 

24 mins ago

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

48 mins ago

ಬೆಂಗಳೂರು ಮೆಟ್ರೋದಲ್ಲಿ ರೋಮ್ಯಾನ್ಸ್; ವಿಡಿಯೋ ವೈರಲ್

ದೆಹಲಿಯ ಮೆಟ್ರೋ ದಲ್ಲಿ ರೊಮ್ಯಾನ್ಸ್ ನಡೆಸುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೂ ಇದೇ ಚಾಳಿ ಪ್ರಾರಂಭವಾಗಿದ್ದು,…

55 mins ago

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ…

1 hour ago

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ…

1 hour ago