Categories: ಮೈಸೂರು

ಅಂಚೆ ಇಲಾಖೆಯಿಂದ ಚಿನ್ನದ ಮೇಲೆ ಹೂಡಿಕೆಗೆ ಅವಕಾಶ

ಮೈಸೂರು: ಭಾರತಿಯ ಅಂಚೆ ಇಲಾಖೆಯ ವತಿಯಿಂದ ಸಾವರಿನ್‍ ಗೋಲ್ಡ್ ಬಾಂಡ್‍ ಯೋಜನೆಯಡಿ ಎಲ್ಲಾ ಅಂಚೆ ಕಚೇರಿಗಳಲ್ಲಿ 2022ರ ಜನವರಿ 14ರ ವರೆಗೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನವರಿ 14ರಂದು ಸಂಕ್ರಾಂತಿ ರಜೆ ಬಂದಲ್ಲಿ ಜನವರಿ 13ರವರೆಗೂ ಅವಕಾಶವಿರುತ್ತದೆ ಎಂದು ಮೈಸೂರು ದಕ್ಷಿಣಾ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಈ ಹೂಡಿಕೆಗೆ ಜಿ.ಎಸ್.ಟಿ ಹೊರೆಇರುವುದಿಲ್ಲ. ಚಿನ್ನದ ಮೇಲೆ ಹೂಡಿಕೆಯಾಗಿದ್ದರೂ, ಅಂಗಡಿಯಲ್ಲಿ ಚಿನ್ನದ ಖರೀದಿ ಮೇಲಿನ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ಇರುವುದಿಲ್ಲ. ಹೂಡಿಕೆ ಮಾಡುವ ಆಸಕ್ತರು ಅಂಚೆ ಕಚೇರಿಗೆ ಪಾನ್ ಕಾರ್ಡ್, ವಿಳಾಸ ದಾಖಲೆ, ಒಂದು ಪಾಸ್ ಪೋರ್ಟ್ ಸೈಜ್ ಪೋಟೋ ಹಾಗೂ ಬ್ಯಾಂಕ್ ಪಾಸ್‍ಬುಕ್‍ನ ಮೊದಲ ಪುಟದ ಪ್ರತಿ ಸಲ್ಲಿಸಿ ಚೆಕ್, ಡಿಮಾಂಡ್‍ ಡ್ರಾಫ್ಟ್‍ ಅಥವಾ ಅಂಚೆ ಉಳಿತಾಯ ಖಾತೆಯಿಂದ ಹೂಡಿಕೆ ಮೊತ್ತ ಪಾವತಿ ಮಾಡುವ ಸೌಲಭ್ಯವಿದೆ.

ಸಾವರಿನ್‍ ಗೋಲ್ಡ್ ಬಾಂಡ್? ಎಂದರೇನು ಎಂಬುದನ್ನು ನೋಡಿದ್ದೇ ಆದರೆ ಕನಿಷ್ಠ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಒಂದು ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆ.ಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಠ ಹೂಡಿಕೆಯಾಗಿರುತ್ತದೆ.

ಬಾಂಡ್‍ಅವಧಿ 8 ವರ್ಷವಾಗಿದ್ದು, ಬಾಂಡ್‍ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ದರ ಮೋತ್ತವನ್ನು ನೀಡಲಾಗುವುದು. ವಾರ್ಷಿಕ ಶೇಕಡ 2.5 ರಷ್ಟು ನಿಶ್ಷಿತ ಬಡ್ಡಿಯೂ ಲಭ್ಯವಿರುತ್ತದೆ. (ಅರ್ಧವಾರ್ಷಿಕ- ವರ್ಷಕ್ಕೆಎರಡು ಬಾರಿ), 5,6,7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿದ್ದು, ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹುದಾಗಿದೆ.

ಭಾರತಿಯ ಅಂಚೆ ಇಲಾಖೆಯೂ 2015ರಲ್ಲಿ ಆರಂಭಿಸಿರುವ ಸಾವರಿನ್ ಬಾಂಡ್‍ ಯೋಜನೆಯಿಂದ ದೇಶಾದ್ಯಂತ ಈ ವರೆಗೂ 31 ಸಾವಿರ ಕೋಟಿ ವ್ಯವಹಾರವಾಗಿದೆ. ಮೈಸೂರು ಅಂಚೆ ವಿಭಾಗವು 2020-2021 ನೇ ಸಾಲಿನಲ್ಲಿ 5 ಕೋಟಿ 93 ಲಕ್ಷ ವ್ಯವಾಹಾರ ಮಾಡಿ ಕರ್ನಾಟಕ ಅಂಚೆಯವಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈ ಕುರಿತಂತೆ  ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿ ಅಥವಾ ದೂ.ಸಂ. 0821-2417308, 2417307 ಹಾಗೂ ಮೊ.ಸಂ.9845107947 ಅನ್ನು ಸಂಪರ್ಕಿಸ ಬಹುದಾಗಿದೆ.

Sneha Gowda

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

6 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

6 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

7 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

7 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

8 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

9 hours ago