News Karnataka Kannada
Thursday, April 18 2024
Cricket
ಮೈಸೂರು

ಶೀಘ್ರವೇ ಮೈಸೂರು-ಬೆಂಗಳೂರು ದಶಪಥ ರಸ್ತೆ ಸಂಚಾರಕ್ಕೆ ಲಭ್ಯ

Where will Siddaramaiah get money from: Pratap Simha
Photo Credit :

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ  ಯೋಜನೆಯ ಕಾಲಮಿತಿಯೊಳಗೆ ಮುಕ್ತಾಯವಾಗುವುದರೊಂದಿಗೆ ಸದ್ಯ ಬೆಂಗಳೂರಿನಿಂದ ನಿಡಘಟ್ಟದವರೆಗಿನ ರಸ್ತೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಢಘಟ್ಟದಿಂದ ಮೈಸೂರುವರೆಗೆ ದಸರಾ ಒಳಗೆ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 8,532 ಕೋಟಿ ಅನುದಾನ ನೀಡಿದೆ. 700 ಮೀಟರ್ 150 ರಸ್ತೆಗೆ ಸಂಪರ್ಕ ಕಲ್ಪಿಸಲು, ಕೊಲಂಬಿಯಾ ಏಷಿಯಾ ಆಸ್ಪತ್ರೆ ರಸ್ತೆ ಬಳಿ ಫ್ಲೈಓವರ್, ಒಂದು ಕಡೆ ಹೆಲಿಪ್ಯಾಡ್, 2 ಕಡೆಗಳಲ್ಲಿ ರೆಸ್ಟ್ ಏರಿಯಾ, ಹೋಟೆಲ್, ಕರಕುಶಲ ವಸ್ತುಗಳ ಮಾರಾಟ, 16 ಕಡೆಗಳಲ್ಲಿ ಪ್ರವೇಶಕ್ಕೆ ಚಿಂತನೆ ಮಾಡಲಾಗುವುದು.

96 ಬಸ್ ನಿಲ್ದಾಣ ಬರಬೇಕು. 18 ಕಡೆಗಳಲ್ಲಿ ಪಾದಚಾರಿಗಳಿಗೆ ಪುಟ್ ಪಾತ್ ಮಾಡಬೇಕು. ಮೈಸೂರು ಟು ಕುಶಾಲನಗರ ನಾಲ್ಕು ಪಥದ ರಸ್ತೆಗೆ 4 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಪಶ್ಚಿಮ ವಾಹಿನಿಯಿಂದ ಪಿರಿಯಾಪಟ್ಟಣ, ಪಿರಿಯಾಪಟ್ಟಣ ಗುಡ್ಡೆಹೊಸೂರು, ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ 120 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು