News Karnataka Kannada
Saturday, April 20 2024
Cricket
ಮೈಸೂರು

ಶಾಸಕರಾಗುವವರು ಕ್ಷೇತ್ರದ ಜನರ ಕಷ್ಟಸುಖ ಆಲಿಸಿ: ಡಿ.ಕೆ.ಶಿವಕುಮಾರ್

D.k Sivakumar
Photo Credit :

ಕೆ.ಆರ್.ಪೇಟೆ: ಶಾಸಕರಾಗುವ ಅಪೇಕ್ಷೆ ಹೊಂದಿರುವವರು ಕ್ಷೇತ್ರದ ಪ್ರತಿ ಮನೆ ಮನೆಗೆ ಹೋಗಿ ಜನರ ಕಷ್ಟ ಸುಖ ಆಲಿಸಬೇಕು. ಯುವಕರನ್ನು ಹೆಚ್ಚು ಹೆಚ್ಚು ಸದಸ್ಯರನ್ನಾಗಿಸಿ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸುವ ಕೆಲಸ ಮಾಡಬೇಕು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿದರು.

ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯಭವನದಲ್ಲಿ ಆಯೋಜಿಸಿದ್ದ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಲೆಟರ್ ಹೆಡ್ ಮುಖಂಡರನ್ನು ಯಾವುದೇ ಮುಲಾಜಿಗೂ ಒಳಗಾಗದೆ ಪಕ್ಷದಿಂದ ದೂರವಿಡಲಾಗುವುದು ಎಂದು ಎಚ್ಚರಿಸಿದ ಅವರು ನೊಂದಣಿಯಾದ ಸದಸ್ಯರ ಧ್ವನಿಯೇ ಪಕ್ಷದ ಧ್ವನಿ. ನಾನು ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಬೇಕಾದರೆ ಸದಸ್ಯರು ನನ್ನ ಪರ ಮತ ಚಲಾಯಿಸಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೂ ಇನ್ನು ಮುಂದೆ ನೊಂದಾಯಿತ ಸದಸ್ಯರ ಮೂಲಕವೇ ಆಯ್ಕೆ ಮಾಡಲಾಗುವುದೆಂದು ತಿಳಿಸಿದರು.

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಈಗ ಒಬ್ಬರೇ ಒಬ್ಬ ಕಾಂಗ್ರೆಸ್ ಶಾಸಕರಿಲ್ಲ. ಒಂದು ಕಾಲದಲ್ಲಿ ಈ ಎರಡೂ ಜಿಲ್ಲೆಗಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳಾಗಿದ್ದವು. ಮುಂದಿನ ಚುನಾವಣೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲೂ ಕಾಂಗ್ರೆಸ್ ಶಾಸಕರಿರಬೇಕು. ನನಗೆ ಇಲ್ಲಿ ಸನ್ಮಾನಿಸಿ ಬೆಳ್ಳಿ ಗದೆ ನೀಡಿದ್ದೀರಿ. ಕೆ.ಆರ್.ಪೇಟೆಯಲ್ಲಿ ಮುಂದೆ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾದಾಗ ಮಾತ್ರ ನನಗೆ ನೀವು ಗದೆ ನೀಡಿದ್ದು ಸಾರ್ಥಕವಾಗುತ್ತದೆ. ನಿಮ್ಮ ಬೆಳ್ಳಿಗದೆಯನ್ನು ಬೇಕಾದರೆ ನಿಮಗೆ ವಾಪಸ್ ನೀಡುತ್ತೇನೆ. ಕರಪತ್ರ ಮುದ್ರಿಸಲು ನಿಮ್ಮ ಬಳಿ ಹಣವಿಲ್ಲದಿದ್ದರೆ ನಾನೇ ಕಾಸು ಕೊಡುತ್ತೇನೆ. ಕರಪತ್ರ ಮುದ್ರಿಸಿ ಮನೆ ಮನೆಗೆ ಹೋಗಿ ಸದಸ್ಯರ ನೊಂದಣಿ ಮಾಡಿಸಿ. ಪ್ರಸ್ತುತ ಕೆ.ಆರ್.ಪೆಟೆಯಲ್ಲಿ ಸುಮಾರು ೨೬ ಸಾವಿರ ಸದಸ್ಯರ ನೊಂದಣಿಯಾಗಿದೆ. ಏ.೧೫ ರೊಳಗೆ ಇದು ಐವತ್ತು ಸಾವಿರಕ್ಕೆ ದಾಟಬೇಕು. ೫೦ ಸಾವಿರ ಸದಸ್ಯರ ನೊಂದಣಿಯಾಗದಿದ್ದರೆ ನಾನು ಮತ್ತೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಯಾರು ಬಂದು ಕರೆದರೂ ಮತ್ತೆ ಬರುವುದಿಲ್ಲ ಎಂದು ಹೇಳಿದರು.

ಹೊಸ ಮುಖಗಳು ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆಯಿದ್ದು, ಯುವಕರಿಗೆ ಆದ್ಯತೆ ನೀಡಲಾಗುತ್ತಿದ್ದು ಪಕ್ಷ ಸಂಘಟನೆ, ಶಿಸ್ತು ಮುಂತಾದುವುಗಳನ್ನು ಮೈಗೂಡಿಸಿಕೊಂಡು ಜನರ ಸೇವೆ ಮಾಡಲು ಸಿದ್ಧವಿರುವವರನ್ನು  ಗುರುತಿಸಿ ಸಂಘಟನಾ ಚಾತುರ್ಯ ಇರುವವರನ್ನು ಪಕ್ಷ ಗುರುತಿಸಲಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ಕೆ.ರೆಹಮಾನ್ ಖಾನ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ರಮೇಶ್ ಬಂಡೀಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್, ಡಿ.ಕೆ.ಶಿ ಅಭಿಮಾನಿ ಬಳಗದ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಚಿನಕುರುಳಿ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು