News Karnataka Kannada
Saturday, April 13 2024
Cricket
ಮೈಸೂರು

ಭೌತಿಕಕ್ಕಿಂತ ಬೌದ್ಧಿಕ ಕಟ್ಟಡ ನಿರ್ಮಿಸಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ

Shree
Photo Credit :

ಮೈಸೂರು: ಮನುಷ್ಯ  ಭೌತಿಕವಾದ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ ತನ್ನೊಳಗೆ ಬೌದ್ಧಿಕವಾದ ಕಟ್ಟಡವನ್ನು ನಿರ್ಮಿಸುವ ಅವಶ್ಯಕತೆ ಇದೆ ಎಂದು ಅಖಿಲ ಕರ್ನಾಟಕ ಶ್ರೀ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು  ಹೇಳಿದರು.

ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು    ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ’ಜ್ಞಾನವಾರಿಧಿ-70’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ  ಸಿದ್ಧರಾಮೇಶ್ವರರ ಸಂದೇಶ ವಿಷಯ ಕುರಿತು ಉಪನ್ಯಾಸ ನೀಡುತ್ತಾ  ಸಿದ್ಧರಾಮೇಶ್ವರರು ಧಾರ್ಮಿಕ ಜಿಜ್ಞಾಸುಗಳು, ಆಧ್ಯಾತ್ಮಿಕ ಹಸಿವಿದ್ದ ಸದ್ಭಕ್ತರು. ಜ್ಞಾನ ಮಾರ್ಗದಲ್ಲಿ ಸಾಗುವ ಆಶಯವನ್ನು ಹೊಂದಿದ್ದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಒಂದು ಅದ್ಭುತ ಕಲ್ಪನೆ. ಅಲ್ಲಮಪ್ರಭುದೇವರು ಸಿದ್ಧರಾಮರ ಮೂಲಕ ಲೋಕಕಲ್ಯಾಣವನ್ನು ಮಾಡಿಸಿದರು.

ಸಿದ್ಧರಾಮರ ವಚನಗಳಿಂದ ಮನಸ್ಸು ಪರಿವರ್ತನೆಗೆ ತೆರೆದುಕೊಳ್ಳುತ್ತದೆ. ಬಡತನದ ಬೇಗೆಯಲ್ಲಿದ್ದವರಲ್ಲಿ ಮಾತ್ರ ನಿಜವಾದ  ಭಕ್ತಿ ಇರುತ್ತದೆ. ಇಂದು ದೇವರ ಜೊತೆಯೆ ಕೊಡುಕೊಳ್ಳುವಿಕೆಯ ವ್ಯವಹಾರವನ್ನು ಮಾಡಲಾಗುತ್ತಿದೆ. ಬಡವರ ಭಕ್ತಿಯನ್ನು ವೈಜ್ಞಾನಿಕತೆಗೆ ತಂದವರು ಬಸವಾದಿ ಶರಣರು.  ಬಡವರ ಮುಗ್ಧತೆಯನ್ನು ಮೌಢ್ಯಕ್ಕೆ ತಳ್ಳದೆ ವೈಚಾರಿಕತೆಯ ಒರೆಗೆ ಹಚ್ಚುವ ಕೆಲಸವನ್ನು ಸಿದ್ಧರಾಮರು ಮಾಡಿದರು. ಶ್ರಮಿಕವರ್ಗದವರಿಗೂ ಜ್ಞಾನಪಡೆದುಕೊಳ್ಳುವ ಹಕ್ಕನ್ನು ಶರಣರು ನೀಡಿದರು.

 ಶರಣ ಸಂಕುಲ ಸ್ತ್ರೀಯರನ್ನು ಹೆಚ್ಚು ಗೌರವಿಸಿತು. ಭಕ್ತ ಭಗವಂತನಾಗಬೇಕು. ನರ ನಾರಾಯಣನಾಗಬೇಕು. ಪಾಪ ಮಾಡಿದವನನ್ನು ಪಾಪಾತ್ಮ, ಪುಣ್ಯ ಮಾಡಿದವನನ್ನು ಪುಣ್ಯಾತ್ಮ, ಗಾಂಧೀಜಿಯಂತಹ ಕೆಲಸಗಳನ್ನು ಮಾಡಿದರೆ ಮಹಾತ್ಮ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಹುತಾತ್ಮ ಎನ್ನಲಾಗುತ್ತದೆ. ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸಬೇಕು.     ಸ್ವರ್ಗ ಮರ್ತ್ಯಗಳನ್ನು ನಾವಿರುವಲ್ಲಿಯೇ ಸೃಷ್ಟಿಸಿಕೊಳ್ಳಬಹುದು. ವೈಜ್ಞಾನಿಕ ಮತ್ತು ವೈಚಾರಿಕತೆಯ ಮೂಲಕ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು