News Karnataka Kannada
Thursday, April 25 2024
ಮೈಸೂರು

ಬ್ರಾಹ್ಮಣ ಧರ್ಮ‌ ಸಹಾಯ ಸಭಾದಿಂದ ಸಾಮೂಹಿಕ‌ ಉಪನಯನ

Upanayana
Photo Credit :

ಮೈಸೂರು: ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಬ್ರಾಹ್ಮಣ ಧರ್ಮ‌ ಸಹಾಯ ಸಭಾ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣಭವನದಲ್ಲಿ 25ವಟುಗಳಿಗೆ ಸಾಮೂಹಿಕ‌ ಉಪನಯನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ  ಹೆಚ್.ವಿ ರಾಜೀವ್  ಮಾತನಾಡಿ ನಾವು ಬದುಕುವ ಸಮಾಜ ಎಂಬ ಶಾಲೆಯಲ್ಲಿ ಪೋಷಕರು ಸಂಸ್ಕೃತಿ ಎಂಬ ವಿಷಯವನ್ನು ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲೇ ಪರಿಚಯಿಸಿದರೆ ಸಂಸ್ಕಾರವೆಂಬ ಪದವಿ ಪಡೆದು ಉನ್ನತ ಸ್ಥಾನಕ್ಕೇರುತ್ತಾರೆ, ಉಪನಯನ ನಂತರ ಪ್ರತಿದಿನ ಧಾರ್ಮಿಕ ಅನುಷ್ಠಾನ ಆಚರಣೆಯಲ್ಲಿ ತೊಡಗಿದರೆ  ಮಕ್ಕಳಿಗೆ ಏಕಾಗ್ರತೆ ಆಸಕ್ತಿ ಹೆಚ್ಚುತ್ತದೆ.  ಹಿಂದೂ‌ ಧರ್ಮ ಇಂದಿಗೆ ದೇಶದಲ್ಲಿ ಬಲಿಷ್ಠವಾಗಿ ಬೇರೂರಿದೆ ಎಂದರೆ ಶಂಕರಾಚಾರ್ಯರ ಕೊಡುಗೆ ಅಪಾರ. ಭಾರತವನ್ನ ಮೂರು ಬಾರಿ ಪರ್ಯಟನೆ ಮಾಡಿ ಅಷ್ಠಶಕ್ತಿ ಪೀಠಗಳನ್ನ ಸ್ಥಾಪಿಸಿದ್ದಾರೆ, ಶಂಕರ ಜಯಂತಿ ದಿನದಂದು ಸಾಮೂಹಿಕ ಉಪನಯನ‌ವನನು ಬ್ರಾಹ್ಮಣ ಧರ್ಮ‌ಸಹಾಯ ಸಭಾ  ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದರು.

ಆಧುನಿಕ ಶ್ರವಣ ಕುಮಾರ ಎಂದು ಬಿರುದು ಪಡೆದಿರುವ.‌ದಕ್ಷಿಣಾಮೂರ್ತಿ ಜಿ. ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡಾರತ್ನ ಅವರು ತಮ್ಮ‌ ದ್ವಿಚಕ್ರ ವಾಹನದಲ್ಲೆ ಉತ್ತರಭಾರತದ ತೀರ್ಥಯಾತ್ರೆ ಕೈಗೊಂಡಿದ್ದ ಬಗ್ಗೆ ಪೋಷಕರಿಗೆ ದೈವ ಸಮಾನದಲ್ಲಿ ನಾವು ಕಾಣಬೇಕು ಎಂದು  ಸಭೆಯಲ್ಲಿ ಮಕ್ಕಳಿಗೆ ತಿಳಿಸಿದರು.

ಬ್ರಾಹ್ಮಣ ಧರ್ಮ‌ ಸಹಾಯ ಸಭಾ ಅಧ್ಯಕ್ಷ ಎನ್. ಶ್ರೀನಿವಾಸ್, ಶಂಕರನಾರಾಯಣ ಶಾಸ್ತ್ರಿ, ನಿರ್ದೇಶಕ ಅಶ್ವಥ್  ನಾರಾಯಣ್,   ಯುವ ಮುಖಂಡ ಅಜಯ್ ಶಾಸ್ತ್ರಿ ಮಾಜಿ ನಗರ ಪಾಲಿಕೆ ಸದಸ್ಯ ಅನಂತು,‌ ಕೆಆರ್ ಬ್ಯಾಂಕ್ ನಿರ್ದೇಶಕ ಹೆಚ್.ವಿ ಭಾಸ್ಕರ್, ಎಸ್. ರಾಮಪ್ರಸಾದ್, ವಿಶ್ವನಾಥ್, ಸುಬ್ಬನರಸಿಂಹ, ಜಗದೀಶ್, ಸತೀಶ್, ಹಿರಿಯಣ್ಣ ಸುದರ್ಶನ್ ಇನ್ನಿತರರು ಭಾಗವಹಿಸಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು