News Karnataka Kannada
Tuesday, April 23 2024
Cricket
ಮೈಸೂರು

ಛೋಟಾ ಪಾಕಿಸ್ತಾನ್ ಘೋಷಣೆ: ಎಫ್ ಐಆರ್ ದಾಖಲು

Kavalande
Photo Credit : News Kannada

ಮೈಸೂರು : ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ್ ಘೋಷಣೆ ಮಾಡಿರುವ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮೇರೆಗೆ ಎಫ್ ಐಆರ್ ದಾಖಲಾಗಿದೆ.

ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್ (ಕವಲಂದೆ ಚಿಕ್ಕ ಪಾಕಿಸ್ತಾನ) ಎನ್ನುವ ಹಿನ್ನೆಲೆ ಧ್ವನಿ ಇರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಸ್ ಪಿಗೆ ಆದೇಶ ನೀಡಿದ್ದರು.

ಈ ಸಂಬಂಧ ನಂಜನಗೂಡಿನ ಬಿಜೆಪಿ ನಗರಸಭಾ ಸದಸ್ಯ ಕವಲಂದೆ ಪೊಲೀಸ್ ಠಾಣೆಗೆ ಹಾಗೂ ನಂಜನಗೂಡಿನ ವೃತ್ತನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್ ಅವರಿಗೆ ಶಾಂತಿಗೆ ಭಂಗ ತರುವಂತಹ ವಿಡಿಯೋ ವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಸೌಹಾರ್ಧತೆಗೆ ಹಾಗೂ ದೇಶಭಕ್ತಿ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಯತ್ನ ಮಾಡಲಾಗಿದೆ. ಸಾಮರಸ್ಯತೆಗೆ ಧಕ್ಕೆ ತಂದು ವೈರತ್ವ ಬೆಳೆಯವಂತೆ ನಡೆದುಕೊಂಡಿದ್ದಾರೆಂದು ಕಪಿಲೇಶ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಕೂಡಲೇ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಬಂಧಿಸುವಂತೆ ಮನವಿ ಮಾಡಿದ್ದಾರೆ. ಅವರು ನೀಡಿದ ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು