News Karnataka Kannada
Friday, April 12 2024
Cricket
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವ ಅಗತ್ಯವಿಲ್ಲ: ಪ್ರಮೋದಾದೇವಿ

Pramoda Devi
Photo Credit : News Kannada

ಮೈಸೂರು : ಚಾಮುಂಡಿಬೆಟ್ಟಕ್ಕೆ ಸರ್ಕಾರ ರೋಪ್ ವೇ ನಿರ್ಮಿಸಲು ನಿರ್ಧರಿಸಿರುವ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು ಇದೀಗ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಕೂಡ   ರೋಪ್ ವೇ ಬೇಡ ಎಂದು ಹೇಳಿದ್ದಾರೆ.

ಈ ಕುರಿತಂತೆ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಚಾಮುಂಡಿಬೆಟ್ಟಕ್ಕೆ 20 ನಿಮಿಷದ ಪ್ರಯಾಣವಾಗಿದ್ದು, ಮೆಟ್ಟಿಲು ಕೂಡ ಇದೆ ಹೀಗಿರುವಾಗ ರೋಪ್ ವೇ ಏಕೆ ಎಂದು ಪ್ರಶ್ನಿಸಿದ್ದಾರೆ. ಬೆಟ್ಟಕ್ಕೆ ಕಾರಿನಲ್ಲಿ, ಬೈಕ್ ನಲ್ಲಿ ಹೋಗೋಕೆ 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆ ಇದೆಯೇ ಅನ್ನೋದು ನನ್ನ ಅಭಿಪ್ರಾಯ.

ಚಾಮುಂಡಿ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಸಂರಕ್ಷಣೆ ಆಗಬೇಕು. ಬೆಟ್ಟದ ಮೇಲೆ ಟೌನ್ ಶಿಪ್ ನಿರ್ಮಾಣ ಆಗೋದು ಬೇಡ‌. ಮೂಲ ನಿವಾಸಿಗಳನ್ನು ಬಿಟ್ಟರೆ ಅನ್ಯರ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಸರ್ಕಾರಕ್ಕೆ   ಸಲಹೆ ನೀಡಿದರು.

ಇನ್ನು ಮೈಸೂರು ಪಾರಂಪರಿಕತೆಯ ಬಗ್ಗೆ ಮಾತನಾಡಿದ ಅವರು, ನಗರದಲ್ಲಿರುವ ಹಳೆಯ ಕಟ್ಟಡಗಳಾದ ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವದೆ ಆಧುನಿಕ ನವೀಕರಣ ನಡೆಸಬೇಕು. ಪಾರಂಪರಿಕ ಕಟ್ಟಡಗಳನ್ನು ಕೆಡವುದರಿಂದ ಮೈಸೂರಿನ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಆಗುತ್ತದೆ. ಎರಡೂ ಕಟ್ಟಡಗಳ ನವೀಕರಣ ನಮಗೆ ಬೇಕಿದ್ದರೆ  ಅದನ್ನು ಯಥಾಸ್ಥಿತಿಯಲ್ಲಿ ನವೀಕರಣ ಮಾಡಲು ಸಿದ್ದರಿದ್ದೇವೆ‌ ಎಂದು ಅವರು ಹೇಳಿದರು.

ಈಗಾಗಲೇ ಜಗನ್ಮೋಹನ ಅರಮನೆ, ರಾಜೇಂದ್ರ ವಿಲಾಸ ಅರಮನೆ ಯಥಾಸ್ಥಿತಿಯಲ್ಲಿ ನವೀಕರಣ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳ ವಿಚಾರದಲ್ಲಿ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಇದೇ ಸಂದರ್ಭ ಸಲಹೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು