News Karnataka Kannada
Friday, April 19 2024
Cricket
ಮೈಸೂರು

ಗ್ರಂಥಗಳು ಮನಸ್ಸನ್ನು ಬೆಳಗುವ ಸಾಧನ:ನಂದೀಶ್ ಹಂಚೆ

Bood Day
Photo Credit :

ಮೈಸೂರು: ಮನಸ್ಸನ್ನು ಬೆಳಗಲು ಇರುವ ಏಕೈಕ ಸಾಧನವೆಂದರೆ ಅದು ಗ್ರಂಥಗಳು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ನಂದೀಶ್ ಹಂಚೆ ಅವರು ಅಭಿಪ್ರಾಯಪಟ್ಟರು.

ಅರಿವು ಸಂಸ್ಥೆ ವತಿಯಿಂದ ಚಾಮುಂಡಿಪುರಂನಲ್ಲಿರುವ ಚಾಮುಂಡಿಪುರಂ ಶಾಖೆಯ ಗ್ರಂಥಾಲಯ ಆವರಣದಲ್ಲಿ ವಿಶ್ವಪುಸ್ತಕ ದಿನಾಚರಣೆ ಹಾಗೂ ಪದ್ಮಶ್ರೀ ಪುರಸ್ಕೃತ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶಾದ್ಯಂತ, ರಾಜ್ಯಾದ್ಯಂತ ವಿಶ್ವಪುಸ್ತಕ ದಿನಾಚರಣೆ ಆಚರಿಸಲಾಗುತ್ತಿದೆ. ಪುಸ್ತಕಗಳು ಕೇವಲ ನಮ್ಮ ಜ್ಞಾನವನ್ನಷ್ಟೇ ಹೆಚ್ಚಿಸುವುದಿಲ್ಲ. ನಮ್ಮ ಮನಸ್ಸನ್ನು ಕೂಡ ಪ್ರಫುಲ್ಲಗೊಳಿಸುತ್ತದೆ. ಆ ಕಾರಣದಿಂದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪುಸ್ತಕಗಳನ್ನು ಕೊಂಡು ಓದಿ ಅದನ್ನು ಆನಂದಿಸಬೇಕು. ಏಕೆಂದರೆ ಹೊರಗಿನ ಜಗತ್ತನ್ನು ಬೆಳಗುವುದಕ್ಕೆ ಬೇಕಾದಷ್ಟು ಸಂಗತಿಗಳಿವೆ. ಇಡೀ ಜಗತ್ತನ್ನು ಬೆಳಗಲು ಸೂರ್ಯ, ಚಂದ್ರರಿರುತ್ತಾರೆ. ಮನೆಯನ್ನು ಬೆಳಗಲು ದೀಪವಿರುತ್ತದೆ. ಆದರೆ ಮನಸ್ಸನ್ನು ಬೆಳಗಲು ಯಾವುದಾದರೂ ಏಕೈಕ ಸಾಧನ ಇದೆ ಅಂದರೆ ಅದು ಗ್ರಂಥಗಳು ಮಾತ್ರ. ಆ ಕಾರಣದಿಂದ ಜ್ಞಾನ ಜಗತ್ತನ್ನು ಬೆಳಗಬೇಕು ಎಂಬ ಅಂಬೇಡ್ಕರ್ ಅವರ ಮಾತು ಸದಾಕಾಲ ಸ್ಮರಣೀಯ. ಬೆಳಗಾವಿ ಗಡಿ ಮಹಾರಾಷ್ಟ್ರದಲ್ಲಿ ಪುಸ್ತಕದ ಊರಿದೆ. ಅದೇ ರೀತಿ ಮೈಸೂರು ಕೂಡ ಪುಸ್ತಕದ ಊರಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮತ್ತು ನಂದೀಶ್ ಹಂಚೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಂ ಪ್ರಸಾದ್, ಮಾಜಿ ಸದಸ್ಯ ಜಯಶಂಕರ ಸ್ವಾಮಿ, ಗ್ರಂಥಾಲಯ ಸಹವರ್ತಿ ಹಾಗೂ ಪ್ರಭಾರ ಧಾರಕರಾದ ಮಂಜುಳಾ, ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಯುವ ಮುಖಂಡ ಶಿವಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು