ಮೈಸೂರು

ಮೈಸೂರು: ಜಂಬೂಸವಾರಿಗೆ ಗಜಪಡೆಯ ಎರಡನೇ ತಂಡ ಸೇರ್ಪಡೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸಲು ಎರಡನೇ ತಂಡದ ಗಜಪಡೆ ಬುಧವಾರ ಅರಮನೆಗೆ ಆವರಣಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಒಟ್ಟಾಗಿ ಹದಿನಾಲ್ಕು ಆನೆಗಳು ತಾಲೀಮು ನಡೆಸಲಿವೆ.

ಬುಧವಾರ ಸಂಜೆ ದುಬಾರೆ ಮತ್ತು ರಾಮಪುರ ಸಾಕಾನೆ ಶಿಬಿರಗಳಿಂದ ಗೋಪಿ ನೇತೃತ್ವದಲ್ಲಿ ಐದು ಆನೆಗಳು ಅರಮನೆಗೆ ಆಗಮಿಸಿದವು. ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆ ಆನೆಗಳಿಗೆ ಯಾವುದೇ ಸ್ವಾಗತ ಕಾರ್ಯಕ್ರಮ ನಡೆಸದೇ ಸಂಪ್ರದಾಯದಂತೆ ಕಬ್ಬು, ಬೆಲ್ಲ ತಿನ್ನಿಸಿ ಸ್ವಾಗತಿಸಲಾಯಿತು.

ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ಗಂಡಾನೆಗಳಾದ ಗೋಪಿ (41), ಶ್ರೀರಾಮ (40), ಸುಗ್ರೀವ (40) ಹಾಗೂ ಹೆಣ್ಣಾನೆ ವಿಜಯ (63) ಬಂದರೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿರುವ ರಾಮಪುರ ಸಾಕಾನೆ ಶಿಬಿರದಿಂದ ಅತಿ ಚಿಕ್ಕವಯಸ್ಸಿನ ಗಂಡಾನೆ ಪಾರ್ಥಸಾರಥಿ (18) ದಸರಾ ಗಜಪಡೆಯೊಂದಿಗೆ ಸೇರಿಕೊಂಡವು. ಈ ಮೂಲಕ ದಸರಾ ಜಂಬೂ ಸವಾರಿಯಶಸ್ವಿಗೊಳಿಸಲು ಮೊದಲ ತಂಡದಲ್ಲಿ ಆ.7ರಂದು ಕಾಡಿನಿಂದ ನಾಡಿಗೆ ಆಗಮಿಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9ಆನೆಗಳೊಂದಿಗೆ ಎರಡನೇ ತಂಡದ 5ಆನೆಗಳು ಸೇರಿದ್ದು, ಗಜಪಡೆಯ ಬಲ 14ಕ್ಕೆ ಏರಿಕೆಯಾದಂತಾಗಿದೆ.

ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 2ನೇ ತಂಡದಲ್ಲಿ ಆಗಮಿಸಿರುವ 5ಆನೆಗಳ ಪೈಕಿ 3 ಹೊಸ ಆನೆಗಳು ಇದೇ ಮೊದಲ ಭಾಗವಹಿಸಿರುವುದು ವಿಶೇಷ. ದುಬಾರೆ ಆನೆ ಶಿಬಿರದ ಗೋಪಿ ಮತ್ತು ವಿಜಯ ಆನೆಗಳು ಈ ಹಿಂದೆ ಹಲವು ಬಾರಿ ದಸರಾ ಉತ್ಸವದಲ್ಲಿ ಭಾಗವಹಿಸಿದ್ದರೆ ಶ್ರೀರಾಮ,ಸುಗ್ರೀವ ಹಾಗೂ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ ಹೊಸ ಆನೆಗಳಾಗಿವೆ. ಇದರ ಜೊತೆಗೆ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದಿಂದ ಆಗಮಿಸಿದ್ದ 39 ವರ್ಷದ ಮಹೇಂದ್ರ ಆನೆಯೂ ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗವಹಿಸಲು ಆಗಿಮಿಸಿದೆ.ಈ ಮೂಲಕ 2022ರ ದಸರಾ ಯತ್ಸವದಲ್ಲಿ ಭಾಗವಹಿಸಿರುವ 4 ಆನೆಗಳು ಹೊಸ ಆನೆಗಳಾಗಿವೆ.

ಅರಣ್ಯಖಾತೆ ಸಚಿವ ಉಮೇಶ್ ಕತ್ತಿ ಅವರು ಬುಧವಾರ ರಾತ್ರಿ ಹಠಾತ್ ನಿಧನರಾದ ಹಿನ್ನೆಲೆಯಲ್ಲಿ ದಸರಾಗ ಜಪಡೆಯ 2ನೇ ತಂಡದ ಆನೆಗಳ ಸ್ವಾಗತ ಕಾರ್ಯಕ್ರಮ ರದ್ದಾಯಿತು.ಹಾಗಾಗಿ ಯಾವುದೇ ಸ್ವಾಗತವಿಲ್ಲದೇ ಲಾರಿಗಳ ಮೂಲಕ ನೇರವಾಗಿ ಅರಮನೆ ಆವರಣಕ್ಕೆ ಐದು ಆನೆಗಳು ಆಗಿಮಿಸಿದೆ.

Ashika S

Recent Posts

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

40 mins ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

47 mins ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

57 mins ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

1 hour ago

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

1 hour ago

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ…

2 hours ago