News Karnataka Kannada
Thursday, April 18 2024
Cricket
ಮೈಸೂರು

ಮೈಸೂರು: ಜನ್ಮ ಸದುಪಯೋಗಕ್ಕೆ ಗುರುವಿನ ಅನುಗ್ರಹ ಮುಖ್ಯ

Mysuru: Guru's grace is important for taking birth advantage
Photo Credit : By Author

ಮೈಸೂರು: ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕಾದರೆ ಗುರುವಿನ ಅನುಗ್ರಹಬೇಕು ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ ತಿಳಿಸಿದರು.

ನಗರದ ರಾಮಾನುಜ ರಸ್ತೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಗುರುಗಳನ್ನು ಸ್ಮರಿಸುತ್ತಾ ಗುರುಪೂರ್ಣಿಮೆ ಅಂಗವಾಗಿ ನಡೆದ ಗೋಪೂಜೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಸಿ ನೆಡುವ ಮೂಲಕ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಚಂಚಲ ಬುದ್ಧಿ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮ ಚಿಂತನೆಯನ್ನು ಮಾಡಬೇಕು, ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸಂಪ್ರದಾಯಕ್ಕೆ ವಿಶಿಷ್ಟ ಸ್ಥಾನ ಇದೆ. ಗುರು ವ್ಯಕ್ತಿ ಅಲ್ಲ ಶಕ್ತಿ, ಗುರುವಿನ ಸನ್ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ಮಿಸಬೇಕು ಎಂದರು.

ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ ಮಾತನಾಡಿ ಭಾರತ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆ ಮಹತ್ವವನ್ನು ಪಡೆದುಕೊಂಡಿದೆ. ಗುರುಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಈ ಯುವಕರ ಕಾರ್ಯ ಮಹತ್ವವಾಗಿದೆ ಎಂದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ಎನ್ ಶ್ರೀಧರ್ ಮೂರ್ತಿ ಮಾತನಾಡಿ ತಂದೆ-ತಾಯಿ ನಮ್ಮನ್ನು ಹೊತ್ತು ಹೆತ್ತು ಜನ್ಮ ಬದುಕಿಸಿದರೆ, ಮಾನವ ಜನ್ಮ ಸಾರ್ಥಕತೆ ಮಾಡಿಕೊಳ್ಳುಲು ಸದ್ಗುರುಗಳು ನಮಗೆ ಮೋಕ್ಷದ ದಾರಿಯನ್ನು ತೋರಿಸಿದವರು.ಆಧ್ಯಾತ್ಮಿಕತೆಯಲ್ಲಿ ಕಾಲ ಕಳೆದರೆ ಅದರಲ್ಲಿ ಸಿಗೋ ನೆಮ್ಮದಿಯೇ ಬೇರೆ ಎಂದರು.ಶಾಸ್ತ್ರ ಪ್ರವಚನ ಕೇಳುವುದರಿಂದ ನಮ್ಮ ಮನಸ್ಸು ದೇವನ ಕಡೆಗೆ ಒಲಿಯುತ್ತದೆ. ಆಡಂಬರದ ಜೀವನ ಬಿಟ್ಟು ಸಂತ ಶರಣರ ದರ್ಶನ ಪಡೆದು ಪಾರಮಾರ್ತದಲ್ಲಿ ಪರಮಾನಂದ ಸವಿಯಬೇಕೆಂದರು.

ವಿಪ್ರ ಮಹಿಳಾ ಸಂಗಮದ ಅಧ್ಯಕ್ಷರಾದ ಡಾ. ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗೋ ಪರಿವಾರ ಸಂಚಾಲಕರು, ರಾಕೇಶ್ ಭಟ್, ವಿನಯ್ ಕಣಗಾಲ್, ಸುಚಿಂದ್ರ, ಮಿರ್ಲೆ ಪನಿಷ್, ನಾಗಶ್ರೀ ಸುಚಿಂದ್ರ, ವಿದ್ಯಾ, ಚಿತ್ರ ಸುಚೀಂದ್ರ, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಚಮಯ್ಯ, ಮುಖ್ಯ ಶಿಕ್ಷಕರಾದ ಡಿ ಶಿವಸ್ವಾಮಿ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು