Categories: ಮೈಸೂರು

ಮೈಸೂರು: ಕೊರಿಯನ್‌ ವೆಬ್‌ ಸಿರಿಸ್‌ ನೋಡಿ ಅಜ್ಜಿಯನ್ನು ಕೊಂದ ಮೊಮ್ಮಗನ ಸೆರೆ

ಮೈಸೂರು: 75 ವರ್ಷದ ವೃದ್ಧೆಯ ಕೊಲೆಗೆ ಸಂಬಂಧಿಸಿ ಆಕೆಯ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೈಸೂರಿನ ಗಾಯತ್ರಿಪುರಂ ಲೇಔಟ್ ನಿವಾಸಿ 23 ವರ್ಷದ ಸುಪ್ರೀತ್ ಎಂದು ಗುರುತಿಸಲಾಗಿದೆ.

ಅಜ್ಜಿ ಸುಲೋಚನಾ (75) ಸುಪ್ರೀತ್‌ (23) ನ ಗುಣನಡೆತಗಳನ್ನು ಆಕ್ಷೇಪಿಸಿ ಆಗಾಗ್ಗೆ ಗದರುತ್ತಿದ್ದರು. ಮೇ 28ರಂದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆರೋಪಿ ತನ್ನ ಅಜ್ಜಿಯ ಮೇಲೆ ಹಲ್ಲೆ ನಡೆಸಿ  ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದ. ಆದರೆ ಮೃತದೇಹವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಯದೇ ದಿನವಿಡಿ ಕಾರಿನಲ್ಲಿ ಮೈಸೂರಿನಲ್ಲಿ ಸುತ್ತಾಡಿದ್ದ. ಬಳಿಕ ಅಜ್ಜಿಯ ಶವದೊಂದಿಗೆ ನಜರ್‌ಬಾದ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದ.

ಕೊರಿಯನ್‌ ವೆಬ್‌ಸಿರಿಸ್‌ ನೋಡುತ್ತಿದ್ದ ಸುಪ್ರೀತ್‌ ಅದರಂತೆ ಅಜ್ಜಿಯನ್ನು  ಬೆಂಕಿ ಹಚ್ಚಿ ಕೆಆರ್‌ಎಸ್‌ ಅಣೆಕಟ್ಟೆ ಹಿನ್ನೀರಿನಲ್ಲಿ ಎಸೆದಿದ್ದ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.

ಮೇ 30 ರಂದು ವೃದ್ಧೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಮೃತದೇಹ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆಯಾಗಿರಲಿಲ್ಲ. ಸ್ಥಳದಿಂದ ಕೂದಲಿನ ಮಾದರಿಗಳು ಮತ್ತು ಕನ್ನಡಕಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದು, ನಾಪತ್ತೆಯಾದ ವೃದ್ಧೆಗೂ ಶವದಲ್ಲಿ ದೊರೆತ ಅಂಶಗಳಲ್ಲಿ ಸಾಮ್ಯತೆ ಕಂಡುಬಂದು ಸುಪ್ರೀತ್‌ ನನ್ನು ಪೊಲೀಸ್‌ ಶೈಲಿಯಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Ashika S

Recent Posts

ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದ ನೇಹಾ ಹಿರೇಮಠ ತಂದೆ-ತಾಯಿ

ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…

16 mins ago

ಪ್ರಜ್ವಲ್ ಪ್ರಕರಣ ಕಾಂಗ್ರೆಸ್ ನಿಂದ ರಾಜಕೀಯ: ಅರವಿಂದ ಲಿಂಬಾವಳಿ ಆರೋಪ

ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

34 mins ago

ಬಿಸಿಲಿನ ತಾಪದಿಂದ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಸಾವು

ಬಿಸಿಲಿನ ತಾಪದಿಂದ ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

50 mins ago

ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಲಿ: ಮೊಯ್ಲಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ…

57 mins ago

ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

1 hour ago

ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರ ಡೀಪ್‌ಫೇಕ್ ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ ಎಸ್‌ಟಿಎಫ್  ತಂಡ…

1 hour ago