ಮೈಸೂರು: ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ದಸರಾ ಸಿದ್ದತೆಗಳು ಭರದಿಂದ ಸಾಗಿದೆ. ಈ ನಡುವೆ ಅರಮನೆಗೆ ಅಳವಡಿಸಿರುವ 20 ಸಾವಿರ ಬಲ್ಬ್ ಬದಲಾಯಿಸುತ್ತಿದ್ದರೆ, ಮತ್ತೊಂದೆಡೆ ಅರಮನೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ.
ಇಡೀ ಅರಮನೆಯನ್ನ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಇಲ್ಲಿಗೆ ಅಳವಡಿಸಿರುವ ದೀಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಬಲ್ಬ್ಗಳು ಲಭ್ಯವಿಲ್ಲ. ಚಿನ್ನದಂತ ಮೆರುಗು ನೀಡುವಂತ ಊ ಬಲ್ಬ್ಗಳನ್ನು ಟೆಂಡರ್ ಕರೆದು ವಿಶೇಷವಾಗಿ ಅರಮನೆಗಾಗಿಯೇ ದೆಹಲಿ ಅಥವಾ ಚೆನೈನಲ್ಲಿ ತಯಾರಿಸಿ ತರಿಸಲಾಗುತ್ತಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅರಮನೆಗೆ ಸುಣ್ಣ ಬಣ್ಣ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಮನೆಗಳಿಗೆ ಹೇಗೆ ಸುಣ್ಣ ಬಣ್ಣ ಬಳಿಯುತ್ತೇವೆ. ಅದೇ ಮಾದರಿಯಲ್ಲಿ ಇಡೀ ಅರಮನೆಯ ಪ್ರಾಂಗಣದಲ್ಲಿ ಬಣ್ಣ ಬಳಿಯಲಾಗುತ್ತಿದೆ. ಅದೇ ರೀತಿ ಅರಮನೆ ಆವರಣವನ್ನ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತೆ. ಸುಮಾರು 15ಕ್ಕೂ ಹೆಚ್ಚು ಜಾತಿಯ 10 ಸಾವಿರಕ್ಕೂ ಹೆಚ್ಚು ಹೂಕುಂಡಗಳಿಂದ ಅಲಂಕರಿಸಲಾಗುತ್ತದೆ.