Categories: ಮೈಸೂರು

ಮೈಸೂರು: ಪ್ರತಿಷ್ಠಿತ ಮಾನ್ಸೂನ್ ರೇಸ್ ಆರಂಭ

ಮೈಸೂರು: ಮೈಸೂರು ರೇಸ್ ಕ್ಲಬ್ ನಲ್ಲಿ  18 ದಿನಗಳ ಕಾಲ ಮಾನ್ಸೂನ್ ರೇಸ್ ಆರಂಭವಾಗಲಿದೆ ರೇಸ್  ಕ್ಲಬ್ ಅಧ್ಯಕ್ಷ ವೈ.ಬಿ.ಗಣೇಶ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ರೇಸ್ ಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು,. ಗುರುವಾರ ರೇಸ್‍ ಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು. ಆ.26, ಸೆ.2, 16, 24, ಅ.6, 7, 14, 29 ಹಾಗೂ ಅ.30ರಂದು ಪ್ರಮುಖ ರೇಸ್‌ಗಳು ನಡೆಯಲಿವೆ. ಈ ಹದಿನೆಂಟು ದಿನಗಳ ಅವಧಿಯಲ್ಲಿ 140 ರೇಸ್ ಗಳು ನಡೆಯಲಿವೆ ಎಂದು ತಿಳಿಸಿದರು. ಈ ಬಾರಿ ಪ್ರವೇಶ ದರವನ್ನು 100ನಿಂದ 200ಕ್ಕೆ ಏರಿಕೆ ಮಾಡಲಾಗಿದೆ.ರೇಸ್ ಗಾಗಿ ರೇಸಿಂಗ್ ಟ್ರ್ಯಾಕ್‌ಗಳನ್ನು ಸಿದ್ಧಗೊಳಿಸಲಾಗಿದ್ದು, ಮೈಸೂರು ರೇಸ್ ಕ್ಲಬ್‌ನ 460 ಕುದುರೆಗಳು, ಬೆಂಗಳೂರು ಚೆನ್ನೈ ವಿವಿಧ ಭಾಗದಿಂದ 200 ಕುದುರೆಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಗುಣಮಟ್ಟದ ರೇಸ್ ಸ್ಪರ್ಧೆ ನಡೆಸಲು ಅನುಕೂಲವಾಗುವಂತೆ ಕ್ಲಬ್‌ನ ಪಾಲಿನ ಹಣವನ್ನು (ಸ್ಟೇಕ್‌ಮನಿ) ಶೇ 49ರಷ್ಟು ಹೆಚ್ಚಿಸಲಾಗಿದೆ. ಕ್ಲಬ್‌ನ ಬುಕ್‌ ಮೇಕರ್ಸ್, ಜಯಚಾಮರಾಜೇಂದ್ರ ಗಾಲ್ಫ್ ಕ್ಲಬ್ ರೇಸ್ ಪ್ರಾಯೋಜಿಸಲು ಮುಂದಾಗಿದ್ದು, ಪ್ರಸಕ್ತ ಋತುವಿನಲ್ಲಿ 8 ಕೋಟಿ ಹಣ ವೆಚ್ಚವಾಗುವ ಅಂದಾಜಿದೆ ಎಂದರು. ಈಗಾಗಲೇ ರೇಸ್ ಕ್ಲಬ್‌ಗೆ ತೆರಿಗೆಯ ಹೊರೆ ಹೆಚ್ಚಿರುವುದರಿಂದ ಕ್ಲಬ್ ವಹಿವಾಟು ಸುಮಾರು 500 ಕೋಟಿಯಿಂದ 180 ಕೋಟಿಗೆ ಇಳಿದಿದೆ.

ಯೂನಿಟ್ ಬದಲು ಕಮಿಷನ್ ಮೇಲೆ ಜಿಎಸ್‌ಟಿ ವಿಧಿಸುವಂತೆ ಜಿಎಸ್‌ಟಿ ಮಂಡಳಿಗೆ ಮನವಿ ಮಾಡಲಾಗಿದೆ. ಲ್ಯಾಟರಿ, ಕ್ಯಾಸಿನೊ, ರೇಸ್ ಅನ್ನು ಒಂದೇ ದೃಷ್ಟಿಕೋನದಲ್ಲಿ  ನೋಡದೆ ರೇಸ್ ಕೌಶಲದ ಆಟವಾಗಿ ಪರಿಗಣಿಸಬೇಕು. ತೆರಿಗೆ ಕಡಿಮೆಗೊಳಿಸಬೇಕಿದೆ ಎಂದು ಇದೇ ವೇಳೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಬಿ.ಯು.ಚಂಗಪ್ಪ, ಎಚ್.ಕೆ.ರಮೇಶ್, ಕೆ.ಎಂ.ಚಂದ್ರೇಗೌಡ, ಎನ್‌ಎಚ್‌ಎಸ್ ಮಣಿ, ಕೆ.ವಿ.ಪರೀಕ್ಷಿತ್, ಅಜಿತ್ ಕುಮಾರ್ ರಾಜೇ ಅರಸ್  ಮೊದಲಾದವರು ಇದ್ದು ಮಾಹಿತಿ ನೀಡಿದರು.

Ashika S

Recent Posts

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

9 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

33 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago