Ad

ವಯನಾಡಿನ ಭೀಕರತೆಗೆ ಮೈಸೂರಿನ ಫ್ಯಾಮಿಲಿ ದುರಂತ ಅಂತ್ಯ !

Mysore (1)

ಮೈಸೂರು: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿ 4 ದಿನಗಳು ಕಳೆದಿದೆ. ಈ 4 ದಿನದಲ್ಲಿ ಹುಡುಕಿದಷ್ಟು ಹೆಣದ ರಾಶಿ, ರಾಶಿ ಸಿಕ್ಕಿವೆ. ಕೊಚ್ಚಿಕೊಂಡು ಹೋದ ಗುಡ್ಡದ ಪ್ರವಾಹ ನೂರಾರು ಮಂದಿ ಮಣ್ಣಿನಡಿ ಸಿಲುಕುವಂತೆ ಮಾಡಿದೆ.

ವಯನಾಡಿನ ಚೂರಲ್‌ಮಲಾದಲ್ಲಿ ಮೈಸೂರು ಮೂಲದ ಮಹದೇವಮ್ಮನವರ ಕುಟುಂಬ ದುರಂತ ಅಂತ್ಯ ಕಂಡಿದೆ. ಹಲವು ವರ್ಷದಿಂದ ಇಲ್ಲಿ ವಾಸವಿದ್ದ ಮಹದೇವಮ್ಮ ಫ್ಯಾಮಿಲಿಯ ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ‌ ಕಣ್ಮರೆಯಾಗಿದ್ದರು. ಈ 9 ಮಂದಿಯಲ್ಲಿ ಒಬ್ಬರನ್ನ ಬಿಟ್ಟು ಉಳಿದ ಎಂಟು ಮಂದಿಯ ಶವ ಇದೀಗ ಪತ್ತೆಯಾಗಿದೆ.

ಮಹದೇವಮ್ಮನವರ ಮಗ ಸಿದ್ದರಾಜು, ಸೊಸೆ ಸಾವಿತ್ರಮ್ಮ ಸೇರಿದಂತೆ ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲ, ಲಕ್ಷಿತ್, ದಿವ್ಯಾ ಅವರ ಶವ ಪತ್ತೆಯಾಗಿದೆ. ಚೂರಲ್‌ಮಲಾದ ಶಾಲಾ ಆವರಣದಲ್ಲಿ ಎನ್‌ಡಿಆರ್‌ಎಫ್‌ ಹಾಗು ಶ್ವಾನದಳದಿಂದ ಪತ್ತೆ ಕಾರ್ಯ ನಡೆದಿದೆ. ಕೆಸರಿನ ನಡುವೆ ಸಿಲುಕಿದ್ದ ಶವಗಳನ್ನ ರಕ್ಷಣಾ ತಂಡ ಹೊರ ತೆಗೆದಿದೆ.

ಮೆಪ್ಪಾಡಿಯ ಕಮ್ಯುನಿಟಿ‌ಹಾಲ್‌ನಲ್ಲಿದ್ದ ಶವಗಳನ್ನು ಮಹದೇವಮ್ಮ ಗುರುತಿಸಿದ್ದಾರೆ.  ಇನ್ನು ಕಳೆದ ದಿನ ಗಂಜಿ ಕೇಂದ್ರದಲ್ಲಿ ಮಹದೇವಮ್ಮ ಅವರನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

Ad
Ad
Nk Channel Final 21 09 2023