Bengaluru 29°C
Ad

ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದ ಪ್ರಿಯತಮನ ಕೊಲೆ : ಇಬ್ಬರ ಬಂಧನ

ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಸಹೋದರ ಸೇರಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ನಂಜನಗೂಡು: ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಸಹೋದರ ಸೇರಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ಮೂಲದ ಹಂಪಾಪುರದ ಸಿದ್ದಯ್ಯನಹುಂಡಿ ಗ್ರಾಮದ ನಿವಾಸಿ 32 ವರ್ಷದ ರಾಜೇಶ್ ಮೃತ ದುರ್ದೈವಿಯಾಗಿದ್ದಾನೆ. ಈತನ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಹಾಕಿ ಕೊಲೆಗೈದಿದ್ದಾರೆ. ಪ್ರಿಯತಮೆ ಪ್ರೇಮಾ ಹಾಗೂ ಈಕೆಯ ಸಹೋದರ ಶಿವು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಪ್ರೇಮಾ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರ ನಿವಾಸಿಯನ್ನು ಮದುವೆ ಆಗಿದ್ದಳು.ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡಿದ್ದರು.

ಪ್ರೇಮಾ ಪತಿಗೆ ರಾಜೇಶ್ ಸ್ನೇಹಿತನಾಗಿದ್ದ.ಆಗಾಗ ಮನೆಗೆ ಬಂದು ಪರಿಚಯ ಮಾಡಿಕೊಂಡಿದ್ದ. ಪರಿಚಯ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇಬ್ಬರು ಇದ್ದ ಖಾಸಗಿ ಫೋಟೋ ಹಾಗೂ ಆಡಿಯೋಗಳನ್ನು ವೈರಲ್ ಮಾಡುವುದಾಗಿ ಪ್ರೇಮಾ ಗೆ ರಾಜೇಶ್ ಬೆದರಿಕೆ ಹಾಕಿದ್ದಾನೆ. ಇದೇ ವಿಚಾರದಲ್ಲಿ ಮಾತನಾಡಬೇಕೆಂದು ಪ್ರೇಮಾ ನಿನ್ನೆ ರಾತ್ರಿ ರಾಜೇಶ್ ನ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರೇಮಾ ಹಾಗೂ ಸಹೋದರ ಶಿವು ಇಬ್ಬರೂ ಸೇರಿ ರಾಜೇಶ್ ವಿರುದ್ದ ತಿರುಗಿಬಿದ್ದಿದ್ದಾರೆ. ತನಗೆ ಅಪಾಯ ಎಂದು ತಿಳಿದ ರಾಜೇಶ್ ಇವರಿಂದ ತಪ್ಪಿಸಿಕೊಂಡು ಓಡಿದ್ದಾನೆ.

ನಂಜನಗೂಡು ಪಟ್ಟಣದ ಆರ್.ಪಿ.ರಸ್ತೆಯ 8 ನೇ ಕ್ರಾಸ್ ಬಳಿ ಅಡ್ಡಹಾಕಿದ ಪ್ರೇಮಾ ಹಾಗೂ ಶಿವು ಜೊತೆ ಜಗಳವಾಡಿ ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಹಾಕಿ ಭೀಕರವಾಗಿ ಕೊಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಉಪ ವರಿಷ್ಠಾಧಿಕಾರಿ ನಂದಿನಿ, ಡಿವೈಎಸ್ಪಿ ರಘು, ಪಿಎಸ್ಐ ಬಸವರಾಜು, ಪ್ರಕಾಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರೇಮ ಹಾಗೂ ಶಿವು ಇಬ್ಬರನ್ನೂ ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad