Bengaluru 27°C
Ad

ಎಚ್.ಡಿ.ಕೋಟೆಯಲ್ಲಿ ಮುಂಗಾರು ಆರ್ಭಟ: ಜನಜೀವನ ಅಸ್ತವ್ಯಸ್ತ

ಕಳೆದ ಒಂದು ವಾರದಿಂದ ಪ್ರತಿ ದಿನ ಮಳೆಯಾಗುತ್ತಿದ್ದು ಪೂರ್ವ ಮುಂಗಾರು ನಿರೀಕ್ಷೆಯಂತೆ ಅಬ್ಬರಿಸದ ಕಾರಣ ಕಂಗಲಾಗಿದ್ದ ತಾಲೂಕಿನ ರೈತರಲ್ಲಿ ಹರ್ಷ ತಂದಿದೆ.

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಮುಂಗಾರು ಮಳೆ ಆರ್ಭಟಿಸಿದ ಪರಿಣಾಮ ಭಾರೀ ಹಾನಿ ಸಂಭವಿಸಿದೆ.

ಕಳೆದ ಒಂದು ವಾರದಿಂದ ಪ್ರತಿ ದಿನ ಮಳೆಯಾಗುತ್ತಿದ್ದು ಪೂರ್ವ ಮುಂಗಾರು ನಿರೀಕ್ಷೆಯಂತೆ ಅಬ್ಬರಿಸದ ಕಾರಣ ಕಂಗಲಾಗಿದ್ದ ತಾಲೂಕಿನ ರೈತರಲ್ಲಿ ಹರ್ಷ ತಂದಿದೆ. ಆದರೆ ಇನ್ನೂ ಗುರುವಾರ ಮಧ್ಯಾಹ್ನದಿಂದ ಸಂಜೆವರೆಗೆ ಮಳೆ ಬಿಟ್ಟು ಬಿಡದೆ ಸುರಿದ ಪರಿಣಾಮ ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ, ಕೆರೆಕಟ್ಟೆಗಳು ಭರ್ತಿಯಾಗುತ್ತಿದ್ದು, ಚರಂಡಿಗಳು ಕಸ ಕಡ್ಡಿ ಸಮೇತ ಉಕ್ಕಿ ಹರಿಯುತ್ತಿವೆ.

ಇದರಿಂದಾಗಿ ತಗ್ಗು ಪ್ರದೇಶದ ಕೆಲ ನಿವಾಸಿಗಳ ಮನೆಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದ್ದು, ವರುಣನ ಅಬ್ಬರ ಹೆಚ್ಚಾಗಿ ಮೂರ್ನಾಲ್ಕು ಗಂಟೆಗಳಿಗೂ ಹೆಚ್ಚು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ಪಟ್ಟಣಿಗರು ಪರದಾಡು ವಂತಾಯಿತು, ಇನ್ನೂ ಶಾಲಾ ಕಾಲೇಜು ಮಕ್ಕಳು ಮಳೆಯಲ್ಲೇ ತೋಯ್ದು ಮನೆ ಕಡೆ ಮುಖ ಮಾಡಿದರು.

ಬೇಸಿಗೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿದ್ದ ಶುಂಠಿ, ಬಾಳೆ ಇನ್ನೀತರ ಬೆಳೆಗಳ ರೈತರು ಅಂತರ್ಜಲ ಕುಸಿತಗೊಂಡು ಕೊಳವೆ ಬಾವಿಗಳಲ್ಲಿ ನಿಂತ ಪರಿಣಾಮ ದಿಕ್ಕು ತೋಚದಂತಾಗಿದ್ದರೂ, ಈಗ ತಾಲೂಕಿನ ಎಲ್ಲ ಕಡೆ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ನೆಮ್ಮದಿ ತರಿಸಿದರೂ, ಹಾಕಿರುವ ಬೆಳೆಗಳಿಗೆ ವ್ಯವಸಾಯ, ಔಷಧ, ಗೋಬ್ಬರ ಹಾಕಲು ಮಳೆರಾಯ ಅವಕಾಶ ನೀಡುತ್ತಿಲ್ಲ, ಈಗಾಗಿ ವರುಣ ಅಬ್ಬರ ತಾಲೂಕಿನ ರೈತರ ನಿದ್ದೆಗೆಡಿಸಿದೆ.

ಒಟ್ಟಾರೆ, ತಾಲೂಕಿನಲ್ಲಿ ಮುಂಗಾರು ಆಗಮನ ತಡವಾದರೂ, ನೆರೆಯ ಕೇರಳ ರಾಜ್ಯಕ್ಕೆ ಮಾನ್ಸೂನ್ ಪ್ರವೇಶವಾಗಿರುವುದರಿಂದ ತಾಲೂಕಿನಾಧ್ಯಂತ ವರುಣ ಅಬ್ಬರ ಜೋರಾಗಿದೆ, ಅದರೆ ಮುಂಗಾರು ಮಳೆ ಆರ್ಭಟಿಸುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಮುಂಗಾರು ಮಳೆಯ ಅಬ್ಬರವನ್ನು ಸಮರ್ಥವಾಗಿ ಎದುರಿಸಲು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ನಿದ್ದೆಗೆ ಜಾರಿದಂತೆ ಭಾಸವಾಗುತ್ತಿದೆ.

Ad
Ad
Nk Channel Final 21 09 2023
Ad