Bengaluru 26°C

ಮೈಸೂರಿನಲ್ಲಿ ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ

ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿ ಗೋಷ್ಠಿ ನಡೆಸಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವನ್ನ ರಾಜ್ಯ ಸರ್ಕಾರ ಬಹಳ ಗೌರವಯುತವಾಗಿ ನಡೆಸಿಕೊಟ್ಟಿದೆ.

ಮೈಸೂರು: ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿ ಗೋಷ್ಠಿ ನಡೆಸಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವನ್ನ ರಾಜ್ಯ ಸರ್ಕಾರ ಬಹಳ ಗೌರವಯುತವಾಗಿ ನಡೆಸಿಕೊಟ್ಟಿದೆ. ಅವರನ್ನ ಅತ್ಯಂತ ಗೌರವದಿಂದ ಬೀಳ್ಕೊಟ್ಟಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿತು. ಹಾಗಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಆದರೆ, ಕಾಂಗ್ರೆಸ್ ಅಧಿನಾಯಕಿ ಸೌಜನ್ಯಕ್ಕೂ ಸಂತಾಪ ಸೂಚಿಸಿಲ್ಲ, ಎಸ್.ಎಂ ಕೃಷ್ಣ ಅವರ ಬಗ್ಗೆ ತುಟಿಯನ್ನೇ ಬಿಚ್ಚಿಲ್ಲ ಇದು ವಿಷಾದನೀಯ ಎಂದರು.


ಈ ಹಿಂದೆ ದೇವರಾಜು ಅರಸು ನಿಧನಕ್ಕೂ ಕೂಡ ಕಾಂಗ್ರೆಸ್ ನಾಯಕರು ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ. ಸೋನಿಯಾ ಗಾಂಧಿ ಬಗ್ಗೆ ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದರು. ರಾಜ್ಯಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ. ಬೆಂಗಳೂರನ್ನ ಐಟಿ ಬಿಟಿ ಸಿಟಿ ಮಾಡಿದ್ದು,ಮೈಸೂರನ್ನ ಹೆರಿಟೇಜ್ ಸಿಟಿಯಾಗಿ ಬಿಂಬಿಸಿದ್ದು ಎಸ್ಎಂ ಕೃಷ್ಣ. ಸಿಎಂ ಆಗಿದ್ದ ಅವಧಿ ಯಲ್ಲಿ ಎಸ್.ಎಂ ಕೃಷ್ಣರ ಆಡಳಿತ,ಅಭಿವೃದ್ಧಿ ಕಾರ್ಯ ವೈಖರಿಯನ್ನ ವಿಶ್ವನಾಥ್ ಹೊಗಳಿದರು.


Nk Channel Final 21 09 2023