Bengaluru 25°C
Ad

ಮಾಸ್ತಿ ಕನ್ನಡ ಸಾಹಿತ್ಯ ಬೆಳಗಿಸಿದ ಸ್ಮರಣೀಯರು: ಡಾ.ವೈ.ಡಿ.ರಾಜಣ್ಣ

ಮಾಸ್ತಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರವರ್ಧಮಾನಕ್ಕೆ ತಮ್ಮ ಬದುಕನ್ನ ಸಮರ್ಪಿಸಿಕೊಂಡವರು. ಕಥೆ ಕಾದಂಬರಿ ಕವಿತೆ ನಾಟಕ ವಿಮರ್ಶೆ ಅನುವಾದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ 123 ಕ್ಕೂ ಹೆಚ್ಚು ಕೃತಿ

ಮೈಸೂರು: ಮಾಸ್ತಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರವರ್ಧಮಾನಕ್ಕೆ ತಮ್ಮ ಬದುಕನ್ನ ಸಮರ್ಪಿಸಿಕೊಂಡವರು. ಕಥೆ ಕಾದಂಬರಿ ಕವಿತೆ ನಾಟಕ ವಿಮರ್ಶೆ ಅನುವಾದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ 123 ಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಹೇಳಿದರು.

ನಗರದ ಚಾಮರಾಜಪುರಂನಲ್ಲಿರುವ ಕೆಎಂಪಿಕೆ ಟ್ರಸ್ಟ್ ಕಚೇರಿಯಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾಸ್ತಿಯವರು ಮೈಸೂರು ಸಂಸ್ಥಾನದಲ್ಲಿ ರೆವಿನ್ಯೂ ಅಧಿಕಾರಿಯಾಗಿ ಆಡಳಿತದಲ್ಲೂ ಅಂದಿನ ಗ್ರೀಕ್ ಇಂಗ್ಲೀಷ್ ಪದಗಳಿಗೆ ಕನ್ನಡದ ಹೆಸರುಗಳನ್ನ ಕನ್ನಡತನ ಮೆರೆದರು. ಮಾಸ್ತಿ ಅವರ ಸಾಹಿತ್ಯ ಕಾಲಾತೀತ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ, ಮಾಸ್ತಿ ತಾವು ಬರೆಯುತ್ತಲೇ ತಮ್ಮ ನೆರವು ಕೋರಿ ಬಂದವರಿಗೆ ಆಸರೆಯಾದರು. ಬೇಂದ್ರೆ ಜಿ ಪಿ ರಾಜರತ್ನಂ ಸೇರಿದಂತೆ ಆಕಾಲದ ಬಹಳಷ್ಟು ಲೇಖಕರ ಸಾಹಿತ್ಯ ರಚನೆಗೆ ಒತ್ತಾಸೆಯಾಗಿ ನಿಂತರು. ಈ ಎಲ್ಲ ಸಮಾಜಮುಖಿ ಕಾರ್ಯಗಳಿಂದ ನಾಲ್ವಡಿ ಅವರಿಂದ ರಾಜ ಸೇವಾಸಕ್ತ ಪ್ರಶಸ್ತಿಗೆ ಭಾಜನರಾದರು. ಮಾತೃ ಭಾಷೆ ತಮಿಳು ಆದರೆ ಅವರ ಕನ್ನಡ ಪ್ರೀತಿ ಅಮರವಾದದ್ದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಮಾಸ್ತಿ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಹಲವು ಒತ್ತಡಗಳ ನಡುವೆಯೂ ಬಹಳಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಸಾಹಿತ್ಯದಲ್ಲಿ ಎಲ್ಲೂ ಆಶ್ಲೀಲ ಪದಗಳು ಮತ್ತು ವೈಭವೀಕರಣಗಳು ಕಂಡುಬರುವುದೇ ಇಲ್ಲ. ಜನಸಾಮಾನ್ಯರಿಗೆ ಮನದಟ್ಟಾಗುವಂತೆ ಸರಳವಾದ ಮೌಲ್ಯಾಧಾರಿತ ಕಥೆಗಳನ್ನು ರಚಿಸಿರುವುದು ಅವರ ವಿಶೇಷ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಜಿ ರಾಘವೇಂದ್ರ, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು, ಶ್ರೀಕಾಂತ್ ಕಶ್ಯಪ್, ಸಚಿಂದ್ರ, ಯದು ನಂದನ್, ಕುಲಕರ್ಣಿ ಹಾಗೂ ಇನ್ನಿತರರು ಹಾಜರಿದ್ದರು

Ad
Ad
Nk Channel Final 21 09 2023
Ad