ನಂಜನಗೂಡು: ಬಸವಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಹಲ್ಲರೆ ಮಠಾಧ್ಯಕ್ಷರಾದ ಶ್ರೀ ಬಸವಣ್ಣ ಸ್ವಾಮೀಜಿಗಳ ನೇತೃತ್ವದಲ್ಲಿ ಜಮಾಯಿಸಿದ ನಂಜಗೂಡು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಪದಾಧಿಕಾರಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಬಸವಣ್ಣನವರ ಪ್ರತಿಮೆಯನ್ನು ವಿರೂಪ ಗೊಳಿಸುವುದನ್ನು ಖಂಡಿಸಿದರು.
ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಸ್.ಎಂ ಕೆಂಪಣ್ಣ ಮಾತನಾಡಿ, ನಮ್ಮ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆಗಳು ನಡೆಯುತ್ತಾ ಇರುವುದು ಕಂಡುಬರುತ್ತದೆ. ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿ 2 ಎ ಮೀಸಲಾತಿಗೆ ನಡೆದ ಹೋರಾಟದಲ್ಲಿ ನಮ್ಮ ಸಮಾಜದವರ ಮೇಲೆ ಹಾಗೂ ಸ್ವಾಮೀಜಿಗಳ ಮೇಲೆ ಸರ್ಕಾರ ಲಾಠಿಚಾರ್ಜ್ ಮಾಡಿಸಿರುವುದು ಖಂಡನೀಯ.
ಬೆಂಗಳೂರಿನಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ವಿರೂಪಗೊಳಿಸಿದ್ದರು. ಈಗ ಬೀದರ್ ಜಿಲ್ಲೆ ಬಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದಲ್ಲಿ ಬಸವಣ್ಣನವರ ಪ್ರತಿಮೆಯನ್ನು ವಿರೂಪ ಗೊಳಿಸಿದ್ದಾರೆ. ಇದನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತೀವ್ರವಾಗಿ ಖಂಡಿಸುತ್ತೇವೆ. ಈ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ನಿರ್ದೇಶಕರಾದ ಹಗಿನವಾಳು ಚೆನ್ನಪ್ಪ. ಜಿಲ್ಲಾ ಉಪಾಧ್ಯಕ್ಷರಾದ ಅನುಸೂಯ ಗಣೇಶ್, ಕಾಗಲವಾಡಿ ಮಾದಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರ್ಜುನ್ ಪಾರ್ಥ,
ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ಖಜಾಂಚಿ ಮಡಹಳ್ಳಿ ನಟರಾಜು, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರೇವಣ್ಣ, ಕಾರ್ಯದರ್ಶಿಗಳಾದ ನಂಜಮ್ಮಣಿ, ನಿರ್ದೇಶಕರಾದ ಬದನವಾಳು ಮಹೇಶ್, ಕುರಿಹುಂಡಿ ಮಂಜುನಾಥ್, ಜಿ ಮರಳ್ಳಿ ಮಂಜುನಾಥ್, ಕೋಮಲ, ನಂದಿನಿ, ಕಡಜಟ್ಟಿ ಮಹೇಶ್, ದುಗ್ಗಳ್ಳಿ ಶಿವನಾಗಪ್ಪ, ಯುವ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ನವೀನ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ನಗರ ಘಟಕ ಅಧ್ಯಕ್ಷ ಮಹೇಶ, ಮಹದೇವಪ್ರಸಾದ್. ಎನ್ ಸಿ ಬಸವಣ್ಣ, ಹೆಚ್. ಎಸ್. ಮಹದೇವಸ್ವಾಮಿ, ಗುರು ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.