ಮೈಸೂರು

ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ

ನಂಜನಗೂಡು: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಇಂದು ಸೆ‌. 21ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದ್ದಾರೆ.

ನಂಜನಗೂಡು ನಗರದ ತಾಪಂ ಕಛೇರಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರವು ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ತಮಿಳುನಾಡು ಸರ್ಕಾರದ ಪರವಾಗಿ ಕಾವೇರಿ ಪ್ರಾಧಿಕಾರ ನಿಂತಿದೆ. ನಮ್ಮ ರಾಜ್ಯದ ರೈತರಿಗೆ ಕುಡಿಯಲು ನೀರಿಲ್ಲ. ಬೆಳೆ ಬೆಳೆಯಲು ನೀರಿಲ್ಲ. ಆದರೆ ತಮಿಳುನಾಡಿಗೆ ನೀರು ಬಿಟ್ಟಿರುವುದು ಖಂಡನೀಯ.

ನಮ್ಮ ಗ್ರಾಮಗಳ ಕೆರೆ ಕಟ್ಟೆಗಳಿಗೆ ನೀರು ಬಿಡದೆ, ದಪ್ಪ ಚರ್ಮದ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ. ಕೂಡಲೇ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ  ಸೆ.21 ಗುರುವಾರದಂದು ಮೈಸೂರಿನ ಕಾ.ಡ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದೇವೆ ಎಂದು ಹೇಳಿದರು.

Ashika S

Recent Posts

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

17 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

45 mins ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

1 hour ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

1 hour ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

2 hours ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

2 hours ago