Bengaluru 23°C

ಸುತ್ತೂರು ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟ 155 ಜೋಡಿಗಳು

ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ನವಜೀವನಕ್ಕೆ 155 ಜೋಡಿಗಳು ಕಾಲಿಟ್ಟಿದ್ದಾರೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಂಜನಗೂಡು: ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ನವಜೀವನಕ್ಕೆ 155 ಜೋಡಿಗಳು ಕಾಲಿಟ್ಟಿದ್ದಾರೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. 155 ಜೋಡಿಗಳು ಸತಿಪತಿಗಳಾಗಿ ಸಪ್ತಪದಿ ತುಳಿದ್ರು. ಇದರಲ್ಲಿ, ಪ.ಜಾ 84, ಪ.ಪಂ 22, ಹಿಂದುಳಿದ ವರ್ಗ 22,


ಅಂತರ ಜಾತಿ 23, ಅಂತರ ಧರ್ಮ 1, ನೆರೆ ರಾಜ್ಯ ತಮಿಳುನಾಡಿನ 17 ಜೋಡಿ, ವಿಶೇಷ ಚೇತನರು 3 ಮತ್ತು ಮರು ಮದುವೆ 1 ಸೇರಿ ಒಟ್ಟು 155 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಯಿತು. 2000 ರಿಂದ 2024 ರವರಗೆ ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾಗಿ 3194 ಜೋಡಿಗಳಾಗಿದ್ದಾರೆ. ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 462 ಜೋಡಿಗಳು ಸತಿಪತಿಗಳಾಗಿದ್ದು, ಎಲ್ಲಾ ಸೇರಿ ಇದುವರೆಗೆ ಒಟ್ಟು 3,656 ಜೋಡಿಗಳು ವಿವಾಹವಾಗಿದ್ದಾರೆ.


Nk Channel Final 21 09 2023