ಮಂಡ್ಯ

ಭಾರಿ ಮಳೆಗೆ ಮಂಡ್ಯದಲ್ಲಿ ಸೃಷ್ಟಿಯಾದ ಶಿಂಷಾ ಫಾಲ್ಸ್!

ಈ ಬಾರಿ ಮುಂಗಾರು ಅಬ್ಬರಿಸುತ್ತಿರುವುದರಿಂದ ಮಲೆನಾಡು ಮಾತ್ರವಲ್ಲದೆ ಬಯಲು ಸೀಮೆಯಲ್ಲಿ ಹರಿವ ನದಿಗಳಲ್ಲಿಯೂ ಜೀವ ಕಳೆ ಬಂದಿದ್ದು, ಅವುಗಳ ವೈಭವಕ್ಕೆ ಅಲ್ಲಲ್ಲಿ ಸುಂದರ ಜಲಧಾರೆಗಳು ಸೃಷ್ಟಿಯಾಗಿದ್ದು, ಹೆಬ್ಬಂಡೆಗಳ ಮೇಲಿನಿಂದ ಧುಮ್ಮಿಕ್ಕಿ ಹರಿಯುವ ಸುಂದರ ದೃಶ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದೆ.

ಇದೀಗ ಮಂಡ್ಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಶಿಂಷಾನದಿಗೆ ಜೀವಕಳೆ ಬಂದಿದ್ದು, ಇದರ ಭೋರ್ಗರೆತಕ್ಕೆ ಜಲಪಾತವೊಂದು ಸೃಷ್ಠಿಯಾಗಿ ನಿಸರ್ಗ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಇದುವರೆಗೆ ನದಿ ಹೆಬ್ಬಂಡೆಗಳ ನಡುವೆ ಹರಿಯುತ್ತಿದ್ದರೂ ಭೋರ್ಗರೆದು ಧುಮುಕುತ್ತಿರಲಿಲ್ಲ. ಹೀಗಾಗಿ ಜಲಪಾತ ಸೃಷ್ಠಿಯಾಗಿರಲಿಲ್ಲ. ಜತೆಗೆ ಈ ತಾಣ ಹೆಬ್ಬಂಡೆಗಳಿಂದ ಕೂಡಿದ್ದು ಶಿಂಷಾ ನದಿ ತುಂಬಿ ಹರಿಯದಿದ್ದ ಕಾರಣದಿಂದ ಜಲಪಾತವನ್ನು ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಆದರೆ ಈ ಬಾರಿ ಸುರಿದ ಮಳೆ ಶಿಂಷಾ ನದಿ ತುಂಬಿ ಹರಿಯುವಂತೆ ಮಾಡಿದ್ದು, ಹೀಗೆ ಹರಿಯುವ ನದಿ ಹಲಗೂರು ಬಳಿ ಹರಿಯುವಾಗ ಹೆಬ್ಬಂಡೆಗಳ ಮೇಲಿಂದ ಬೆಳ್ನೊರೆಯುಕ್ಕಿಸುತ್ತಾ ಧುಮ್ಮಿಕುತ್ತಿದ್ದು, ಈ ಸುಂದರ ದೃಶ್ಯ ಕಣ್ಮನ ತಣಿಸುತ್ತಿದೆ.

ಈ ಜಲಪಾತಕ್ಕೆ ನಿರ್ದಿಷ್ಟ ಯಾವುದೇ ಹೆಸರು ಇಲ್ಲದ ಕಾರಣ ಜನ ಅವರಿಷ್ಟ ಬಂದ ಹೆಸರಿನಲ್ಲಿ ಕರೆಯುತ್ತಿದ್ದಾರೆ. ಕೆಲವರು ಶಿಂಷಾ ಜಲಪಾತ, ಕೊಂಡ ಜಲಪಾತ, ಮತ್ತೆ ಕೆಲವರು ಗಾಣಾಳು ಬಳಿ ಇರುವುದರಿಂದ ಗಾಣಾಳು ಜಲಪಾತವೆಂದೇ ಕರೆಯುತ್ತಾರೆ. ಒಂದು ವೇಳೆ ಸದಾ ಈ ಜಲಪಾತದಲ್ಲಿ ನೀರಿದ್ದು ಅದು ಧುಮುಕುವಂತಿದ್ದರೆ, ಮಂಡ್ಯದ ನಯಾಗರವಾಗುತ್ತಿದ್ದುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ಸೌಂದರ್ಯವನ್ನು ನೋಡಬೇಕಾದರೆ ಪ್ರವಾಹೋಪಾದಿಯಲ್ಲಿ ಶಿಂಷಾ ನದಿ ಹರಿಯಬೇಕಾಗುತ್ತದೆ.

ಇಷ್ಟಕ್ಕೂ ಈ ಜಲಪಾತವನ್ನು ನೋಡಲು ಹೋಗುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಜಲಪಾತ ಸೃಷ್ಠಿಯಾಗಿರುವ ಸ್ಥಳಕ್ಕೆ ಸಮರ್ಪಕವಾದ ರಸ್ತೆಯಿಲ್ಲ. ಜತೆಗೆ ಇಲ್ಲೊಂದು ಜಲಪಾತವಿದೆ ಎಂದು ಹೇಳಲು ಯಾವುದೇ ನಾಮಫಲಕಗಳಿಲ್ಲ. ಇನ್ನು ಕಾಲ್ನಡಿಗೆಯಲ್ಲಿ ನಡೆಯುವ ಧೈರ್ಯವೂ ಬೇಕು. ಇದೆಲ್ಲ ಇದ್ದರೂ ಹತ್ತಿರದಿಂದ ನಿಂತು ಜಲಪಾತವನ್ನು ವೀಕ್ಷಿಸಲು ಅನುಕೂಲವಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ಜಲಪಾತ ವೀಕ್ಷಣೆ ಮಾಡುವುದು ಒಂದು ಸಾಹಸ ಎಂದರೆ ತಪ್ಪಾಗಲಾರದು. ಆದರೂ ಇಷ್ಟೆಲ್ಲ ಕಷ್ಟಪಟ್ಟು ಹತ್ತಿರ ಹೋದರೆ ಅದರ ಚೆಲುವಿಗೆ ಮೈಮನಸೋಲದಿರಲಾರರು.

ಏಕೆಂದರೆ ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುವ ದೃಶ್ಯ ಸುಂದರ ಸುರಸುಂದರವಾಗಿದ್ದು, ಶ್ವೇತಧಾರೆಗಳು ಸೃಷ್ಠಿಸುವ ಮಂಜಿನ ಮಳೆಯ ಜತೆಗೆ ನೀರ ಹಾಡು ಮನಸ್ಸಿಗೆ ಖುಷಿಕೊಡುವುದರೊಂದಿಗೆ ನಮ್ಮಲ್ಲಿ ಉಲ್ಲಾಸ ತುಂಬುತ್ತದೆ.

ಇನ್ನು ಜಲಪಾತ ಮಳವಳ್ಳಿ ತಾಲೂಕಿನ ಹಲಗೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಇದನ್ನು ನೋಡಲು ತೆರಳುವವರು ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ ಅಂದರೆ ಹಲಗೂರಿನಿಂದ 5 ಕಿ.ಮೀ. ತೆರಳಿದರೆ ಅಲ್ಲಿ ರಸ್ತೆ ಇಬ್ಭಾಗವಾಗುತ್ತದೆ. ಇಲ್ಲಿ ಬಲಕ್ಕೆ ಬೀರೋಟ ಗ್ರಾಮದ ಕಡೆಗೆ ಹೋಗುವ ಮಾರ್ಗದಲ್ಲಿ ತೆರಳಿ ಕರಲಕಟ್ಟೆ, ಗಾಣಾಳು ಮೂಲಕ ಕೆಂಚಬೋವಿದೊಡ್ಡಿ ಗ್ರಾಮಕ್ಕೆ ತೆರಳಿದರೆ ಅಲ್ಲಿಂದ ಸುಮಾರು 200 ಮೀಟರ್ ದೂರದಲ್ಲಿ ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ತೆರಳಿದರೆ ಜಲಪಾತದ ಬಳಿಗೆ ಹೋಗಬಹುದಾಗಿದೆ.

ಮೊದಲಿಗೆ ತೆರಳುವವರು ಇಲ್ಲಿನ ಸ್ಥಳೀಯರನ್ನು ಜತೆಗೆ ಮಾರ್ಗದರ್ಶಕರನ್ನಾಗಿ ಕರೆದೊಯ್ಯುವುದು ಒಳ್ಳೆಯದು. ಇಲ್ಲದೆ ಹೋದರೆ ರಸ್ತೆ ಹುಡುಕಿಕೊಂಡು ಹೋಗುವುದೇ ದೊಡ್ಡದೊಂದು ಕೆಲಸವಾಗಿ ಬಿಡುತ್ತದೆ. ಮಳೆಯಿಂದ ಸೃಷ್ಠಿಯಾಗಿರುವ ಈ ಜಲಪಾತ ಅಲ್ಪಾಯುಷಿಯಾಗಿರುವುದರಿಂದ ದಿನ ಕಳೆದಂತೆ ಅದರ ವೈಭವ ಕ್ಷೀಣಿಸುತ್ತಾ ಹೋಗುವುದರಿಂದ ಯಾರು ಬೇಗ ಅದರತ್ತ ತೆರಳುತ್ತಾರೋ ಅವರಿಗೆ ಮಾತ್ರ ಚೆಲುವನ್ನು ನೋಡುವ ಅವಕಾಶ ದೊರೆಯಲಿದೆ.

Gayathri SG

Recent Posts

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

17 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

45 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

3 hours ago