ಮಂಡ್ಯ

ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಜಂಬೂ ಸವಾರಿ

ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರವರು ಚಾಲನೆ ನೀಡಿದರು.

ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್‍ನ ಬನ್ನಿಮಂಟಪದ ಬಳಿ ಗಜರಾಜ ಮಹೇಂದ್ರ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭವಾಯಿತು. ಅಂಬಾರಿ ಹೊತ್ತ ಮಹೇಂದ್ರನ ಜೊತೆ ಕಾವೇರಿ ಮತ್ತು ವಿಜಯ ಆನೆಗಳು ಹೆಜ್ಜೆ ಹಾಕಿದವು. ವೀರಗಾಸೆ, ಡೊಳ್ಳುಕುಣಿತ, ತಮಟೆ, ಸೋಮನ ಕುಣಿತ, ನವಿಲು ಕುಣಿತ ಸೇರಿದಂತೆ ಹತ್ತಾರು ಕಲಾ ತಂಡಗಳ ಪ್ರದರ್ಶನ ಮನಸೂರೆಗೊಳಿಸಿತು.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ, ಎಸ್ಪಿಎನ್.ಯತೀಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರೆನ್, ಉಪ ವಿಭಾಗಾಧಿಕಾರಿಗಳಾದ ಬಿ.ಸಿ ಶಿವಂದಾಮೂರ್ತಿ, ಆರ್.ಐಶ್ವರ್ಯ, ತಹಶೀಲ್ದಾರ್ ಗಳಾದ ಶ್ವೇತಾ ಎನ್.ರವೀಂದ್ರ , ಸೇರಿದಂತೆ ಡಾ.ಭಾನುಪ್ರಕಾಶ್ ಸ್ವಾಮೀಜಿ ಇದ್ದರು.

Gayathri SG

Recent Posts

ಮಹಿಳೆ ಮತ್ತು ಮಕ್ಕಳ ಮೇಲೆ ಬರ್ಬರ ಕೃತ್ಯ ಎಸಗುವವರ ವಿರುದ್ಧ ಎನ್ ಕೌಂಟರ್ ಕಾಯ್ದೆ ಜಾರಿಗೆಗೆ ಮನವಿ

ನಗರದ ವೀರಾಪೂರ ಓಣಿಯಲ್ಲಿ ಬಡ ಕುಟುಂಬಕ್ಕೆ ಸೇರಿದ ಅಂಜಲಿ ಮೋಹನ ಅಂಬಿಗೇರ ಕೊಲೆ ವಿರೋಧಿಸಿ ಕರ್ನಾಟಕ ರಾಜ್ಯ ಭೋವಿ (ವಡ್ಡರ)…

11 mins ago

ಸ್ಕೂಟರ್ ಗಳ ನಡುವೆ ಅಪಘಾತ ಸಹ ಸವಾರ ಮೃತ್ಯು

ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಧಾವಿಸುತ್ತಿದ್ದ ಸ್ಕೂಟರ್ಗೆ ಕಲ್ಲಾಪು ಜಂಕ್ಷನ್ ನಲ್ಲಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಮತ್ತೊಂದು ಸ್ಕೂಟರ್ ಢಿಕ್ಕಿ ಹೊಡೆದ…

30 mins ago

ಬೀದರ್: ಗಡಿಭಾಗದಲ್ಲಿ ಮಾದರಿ ಸರ್ಕಾರಿ ಪ್ರೌಢಶಾಲೆ

ಶಿಕ್ಷಕರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತವೆ. ಇದಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ…

43 mins ago

ಜೊಮ್ಯಾಟೊದಲ್ಲಿ ಆರ್ಡರ್‌ : ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌

ಜೊಮ್ಯಾಟೊದಿಂದ ಆರ್ಡರ್‌ ಮಾಡಿದ ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

55 mins ago

ಅಂಜಲಿ‌ ಕೊಲೆಗೆ ಪೊಲೀಸರೇ ಹೊಣೆ : ದಿಂಗಾಲೇಶ್ವರ ಸ್ವಾಮೀಜಿ ಆರೋಪ

ಅಂಜಲಿ ಕೊಲೆಗೆ ಪೊಲೀಸರೆ ಹೊಣೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ಅಂಜಲಿ…

60 mins ago

ಗೆಲ್ಲುತ್ತೀ ಎಂದು ಪಂಜುರ್ಲಿ ದೈವ ಹೇಳಿದೆ, ಹಿಂದೆ ಸರಿಯೊಲ್ಲ: ರಘುಪತಿ ಭಟ್

ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…

1 hour ago