Categories: ಮಂಡ್ಯ

ಪಾಂಡವಪುರ: ಸಾಲಬಾಧೆ ತಾಳಲಾರದೇ ತಾಯಿ-ಮಗಳು ಬಾವಿಗೆ ಹಾರಿ ಆತ್ಮಹತ್ಯೆ

ಪಾಂಡವಪುರ : ಸಾಲಬಾಧೆ ತಾಳಲಾರದೇ ತಾಯಿ ಮತ್ತು ಮಗಳು ತೆರೆದಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ರಾವಕ ಘಟನೆ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ನಂಜೇಗೌಡರ ಪತ್ನಿ ಭಾರತಿ (45), ಪುತ್ರಿ ನಯನಾ (20) ಮೃತರು.

ಘಟನೆ ವಿವರ : ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಭಾರತಿ ಮತ್ತು ನಯನಾ ತಮ್ಮ ಜಮೀನಿನ ಪಕ್ಕದ ಪಂಪ್‌ಸೆಟ್‌ ಬಾವಿಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತನ ಮಗನೂ ಕಳೆದ ನ.2021ರಲ್ಲಿ ಮರಣ ಹೊಂದಿದ್ದನು. ಮೃತರು ಸಣ್ಣಪುಟ್ಟ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಸಾಲದ ಬಾಧೆಯಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಭಾರತಿ ಬಾವಿಗೆ ಹಾರಿದ್ದಾರೆ. ನಂತರ ಪುತ್ರಿ ನಯನಾ ಕೂಡ ಬಾವಿಗೆ ಹಾರಿದ್ದಾಳೆ. ಇಬ್ಬರಿಗೂ ಈಜು ಬಾರದ ಹಿನ್ನೆಲೆಯಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರು ಆತ್ಮಹತ್ಯೆಗೆ ಮಾಡಿಕೊಂಡಿರುವುದನ್ನು ಕಂಡು ಸಾರ್ವಜನಿಕರು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ, ಮೃತದೇಹಗಳನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gayathri SG

Recent Posts

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

11 mins ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

17 mins ago

ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ…

29 mins ago

ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ

ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

48 mins ago

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

58 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

1 hour ago