News Karnataka Kannada
Wednesday, April 24 2024
Cricket
ಮಂಡ್ಯ

ಮುಸ್ಕಾನ್ ತನಿಖೆ ವಿಚಾರ: ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು- ಸುಮಲತಾ

Sumalatha
Photo Credit :

ಮಂಡ್ಯ : ಜಿಲ್ಲೆಯಲ್ಲಿ ಶಾಂತಿಯುತ ವಾತಾವಣರಣವಿದೆ. ಮುಸ್ಕಾನ್ ತನಿಖೆಯಂತ ವಿಚಾರವನ್ನು ಇಟ್ಟುಕೊಂಡು ಉರಿಯೋ ಬೆಂಕಿಗೆ ತುಪ್ಪ ಸುರಿಯುವಂತ ಕೆಲಸ ಮಾಡಬಾರದು ಎಂಬುದಾಗಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಗೆ, ಸಂಸದೆ ಸುಮಲತಾ ಅಂಬರೀಶ್  ಟಾಂಗ್ ನೀಡಿದ್ದಾರೆ.

ಇಂದು ನಗರದಲ್ಲಿ ಮಂಡ್ಯ ಮುಸ್ಕಾನ್ ಳ ತನಿಖೆಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ತನಿಖೆ ಮಾಡಿದ್ರೆ ತಪ್ಪೇನಿಲ್ಲ, ತನಿಖೆ ಆಗಿ ನಿಜ ಹೊರಗೆ ಬರಬೇಕು. ಮಂಡ್ಯ ಹಾಗೂ ರಾಜ್ಯದಲ್ಲಿ ವಾತಾವರಣ ಶಾಂತಿಯುತವಾಗಿದೆ. ರಾಜಕೀಯ ವಾಗಿ ಮಾತಾಡಿ ವಾತಾವರಣ ಕೆಡೆಸುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಎಲ್ಲಾ ಸಮಾಜಗಳು ಒಂದಾಗಿ, ಈ ಸಮಸ್ಯೆ ಬಗೆಹರಿಸಬೇಕು. ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಯಾರೋ ಹೇಳಿಕೆಯಿಂದ ಬಲಿಪಶು ಆಗೋದು ಬಡವರು. ಈ ರೀತಿ ಯಾರು ಕೂಡ ಮಾಡಬಾರದು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ತಾವು ಬಿಜೆಪಿ ಸೇರುವ ಸುದ್ದಿಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್ ನಿಂತಾಗಿನಿಂದ ಈ ಮಾತು ಕೇಳಿ ಬರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ ಇದೆ. ಜಿಲ್ಲೆಯ ಜನ ಹೇಗೆ ಹೇಳ್ತಾರೋ ಹಾಗೆ. ಒಂದು ಪಕ್ಷ ಸೇರುವುದಕ್ಕೆ ಮಂಡ್ಯದ ಜನ ಹೇಳಬೇಕೆ ಹೊರತು ನಾನಾಗಿ ನಾನು ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೇನೆ. ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಲಿಸಿ ಎಂದರು ಜನರು ಹೇಳುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್‌ಗೆ ಬಿಟ್ಟಿದ್ದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು