News Karnataka Kannada
Friday, April 12 2024
Cricket
ಮಂಡ್ಯ

ಗ್ರಾಮದೇವತೆ ಪಟ್ಟಲದಮ್ಮನ  ಹಬ್ಬಾಚರಣೆ

Pattdalamba
Photo Credit :

ಮದ್ದೂರು: ಹಲಗೂರು ಗ್ರಾಮದ ಹೊರ ಭಾಗದಲ್ಲಿರುವ ಪಟ್ಟಲದಮ್ಮನ ಹಬ್ಬವು ಮೂರು ದಿನಗಳ ಕಾಲ ವೈಭವದಿಂದ ನಡೆಯಿತು.

ಹಬ್ಬವು ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಡೆದಿರಲಿಲ್ಲ. ಇತ್ತೀಚೆಗೆ ಕೊರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ತಮ್ಮ ಸಂಬಂಧಿಕರನ್ನು ಬರಮಾಡಿಕೊಂಡು ಹಬ್ಬವನ್ನು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಆಚರಿಸಿದರು.

ಮೂರು ದಿನಗಳ ಕಾಲ ನಡೆದ ಹಬ್ಬದಲ್ಲಿ ವಿವಿಧ ಪೂಜಾ ಕಾರ್ಯಕ್ರಮವಲ್ಲದೆ, ಕರಿ ಬೀದಿಯಲ್ಲಿರುವ ಕರಗದ ಮನೆಯಿಂದ ಕರಗವನ್ನು ಹೊತ್ತು ವೀರಭದ್ರ ದೇವಸ್ಥಾನಕ್ಕೆ ಕೊಂಡೊಯ್ದು ಹೂ, ಹೊಂಬಾಳೆ ಮುಡಿಸಿ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಯ ನಂತರ ಕರಗವನ್ನು ಹೊತ್ತು ಮಡಿವಾಳ ಹಾಸಿದ ಮಡಿಯ ಮೇಲೆ ಪಟ್ಟಲದಮ್ಮ ದೇವಸ್ಥಾನದತ್ತ  ಜೋಡಿ ಬಸವ ಮತ್ತು ತಂಬಿಟ್ಟಿನ ಆರತಿಯೊಂದಿಗೆ ಮುತ್ತೈದೆಯರು ಮೆರವಣಿಗೆಯಲ್ಲಿ ತೆರಳಿದರು.

ಕೊಂಡೋತ್ಸವ ನಡೆದ ನಂತರ ಮುತ್ತೈದೆಯರು ದೇವರಿಗೆ ತಂಬಿಟ್ಟಿನ ಆರತಿ ಎತ್ತಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸುವುದರೊಂದಿಗೆ ಹಬ್ಬಕ್ಕೆ ತೆರೆಬಿದ್ದಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು