ಮಡಿಕೇರಿ

ಕಾಫಿ ಪ್ಲಾಂಟೇಷನ್ ಒತ್ತುವರಿ ಕಂದಾಯ ಜಮೀನು ಗುತ್ತಿಗೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಒಪ್ಪಿಗೆ

ಮಡಿಕೇರಿ: ಕಾಫಿ ಪ್ಲಾಂಟೇಷನ್ ಬೆಳೆಗಾರರಿಗೆ ರಾಜ್ಯ ಸರ್ಕಾರ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಕುರಿತಂತೆ ವಿಧಾನ ಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರ ಒಕ್ಕೂಟದ ಜತೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಕಾಫಿ ಪ್ಲಾಂಟರ್ಸ್ ಫೆಡರೇಶನ್ ಅಧ್ಯಕ್ಷ ಪ್ರಕಾಶ್, ರಾಜೀವ್ ಹಾಜರಿದ್ದರು.

ಗುತ್ತಿಗೆ ಶುಲ್ಕ ಒಂದು ವರ್ಷದ ಅವಧಿಗೆ ಒಂದರಿಂದ ಹತ್ತು ಎಕರೆ ವರೆಗೆ, ಎರಡು ಸಾವಿರ ರೂಪಾಯಿ ಹತ್ತರಿಂದ ಇಪ್ಪತ್ತು ಎಕರೆವರೆಗೆ, ಎರಡು ಸಾವಿರದ ಐದುನೂರು ರೂಪಾಯಿ, ಇಪ್ಪತ್ತರಿಂದ ಇಪ್ಪತೈದು ಎಕರೆವರೆಗೆ ಮೂರು ಸಾವಿರ ರೂಪಾಯಿ ಶುಲ್ಕ ವಿಧಿಸುವ ಬಗ್ಗೆ ಕಂದಾಯ ಸಚಿವರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದವರಿಗೆ ಸಾಮಾನ್ಯ ವರ್ಗದ ಬೆಳೆಗಾರರಿಗೆ ಶುಲ್ಕದ ಶೇ 50 ಭಾಗ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆನಡೆಸಿ ಒಪ್ಪಿಗೆ ನೀಡಲಾಗಿದೆ.

ಗುತ್ತಿಗೆ ಆಧಾರದಲ್ಲಿ ಮೇಲೆ ನೀಡಿದ ಜಮೀನುಗಳಿಗೆ ಸಾಲ ಸೌಲಭ್ಯವನ್ನು ರಾಷ್ಟ್ರೀ ಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಕೊಡುವ ಕುರಿತು ಹಾಗೂ ಕಾಫಿ ಮತ್ತು ಇತರ ಬೆಳೆಗಾರನಿಗೆ ಗುತ್ತಿಗೆ ಆಧಾರದ ಮೇಲೆ ಒತ್ತುವರಿ ಜಮೀನನ್ನು ನೀಡಿದ ಮೇಲೆ ಅವರ ಮರಣ ನಂತರ ವಾರಸುದಾರರಿಗೆ ಗುತ್ತಿಗೆ ವರ್ಗಾವಣೆ ಮಾಡಬೇಕು ಹಾಗೂ ಬೆಳೆಗಾರ ಮೂಲ ಕಾಫಿ ಜಮೀನು ಮಾರಿದರೆ ಅದರ ಜೊತೆಯಲ್ಲಿ ಬರುವ ಗುತ್ತಿಗೆ ಜಮೀನಿನ್ನು ಖರೀದಿಗಾರನಿಗೆ ಸರ್ಕಾರದ ಕರಾರಿನಂತೆ ಮುಂದುವರೆಸಿಕೊಂಡು ಹೋಗುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ಹಳೆಯ ಅರೇಭಿಕಾ ಮತ್ತು ರೊಬೊಸ್ಟಾ ಗಿಡಗಳನ್ನು ತೆಗೆದು ಹೊಸಗಿಡಗಳನ್ನು ತೆಗೆದು ಹೊಸಗಿಡ ಮರುನಾಟಿ ಮಾಡಿದ ಹಾಗೂ ಶೀಘ್ರ ಫಸಲಿಗೆ ಬರುವ ತಳಿಗಳನ್ನು ಬೆಳೆದಿರುವುದನ್ನು ಪರಿಗಣಿಸಿ ಗುತ್ತಿಗೆ ಆಧಾರದ ಮೇಲೆ , ಕಾಫಿ ಬೆಳೆದಿರುವ ಭೂಮಿ ಅಂದರೆ ಮೀಸಲು ಅರಣ್ಯ ಹೊರತು ಪಡಿಸಿ ಬೇರೆ ಯಾವುದೇ ವರ್ಗಕ್ಕೆ ಸೇರಿದ್ದರೆ ಅದನ್ಬು ಸಹ ಗುತ್ತಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್ ತಿಳಿಸಿದರು.

ಪ್ಲಾಂಟೇಷನ್ ಬೆಳೆಗಾರರಿಗೆ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತು ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ವಿಶೇಷವಾಗಿ ಕಂದಾಯ ಸಚಿವ ಆರ್. ಅಶೋಕ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆದು ಅಭಿನಂದಿಸಲಾಗುವುದು. ಜತೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವ ರಾಜ್, ಶಾಸಕರಾದ ಎಚ್.ಕೆ.ಕುಮಾರ ಸ್ವಾಮಿ, ಎಂ.ಪಿ.ಕುಮಾರ ಸ್ವಾಮಿ, ಟಿ.ಡಿ.ರಾಜೇ ಗೌಡ.ಇನ್ನಷ್ಟು ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

5 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

6 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

6 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago