Categories: ಮಡಿಕೇರಿ

ಮೇ.6 ರಂದು ಮಿನಿ ವಿಮಾನಗಳ ಹಾರಾಟದ ಮೂಲಕ ಮತದಾನ ಮಹತ್ವ ಸಾರುವ ಸಂದೇಶ

ಮಡಿಕೇರಿ: ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮೇ, 6 ರಂದು ಬೆಳಗ್ಗೆ 10 ಗಂಟೆಗೆ ಬಾಳೆಲೆ ಬಳಿಯ ಕಾರ್ಮಾಡು ಗ್ರಾಮದಲ್ಲಿ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಿನಿ ವಿಮಾನಗಳ ಹಾರಾಟ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದು ಜಿ.ಪಂ.ಸಿಇಒ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ  ಡಾ.ಎಸ್.ಆಕಾಶ್  ತಿಳಿಸಿದ್ದಾರೆ.

ಮೇ, 6 ರಂದು ಬೆಳಗ್ಗೆ 10 ಗಂಟೆಗೆ ಬಾಳೆಲೆ ಕಾರ್ಮಾಡು ಗ್ರಾಮದ ಕೊಳ್ಳಿಮಾಡ ರಾಜಿ ಗಣಪತಿ ಮತ್ತು ತಂಡದಿಂದ ಗ್ರಾಮದ ಖಾಸಗಿ ಏರ್‍ಸ್ಟ್ರಿಪ್‍ನಲ್ಲಿ 30 ಕ್ಕೂ ಅಧಿಕ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಕಾರ್ಯಕ್ರಮ ನಡೆಯಲಿದೆ.

ಯುವ ಮತದಾರರು, ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಈ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಿನಿ ವಿಮಾನಗಳ ಹಾರಾಟದ ಪ್ರದರ್ಶನ ವೀಕ್ಷಿಸಿ ಮತದಾನ ಮಹತ್ವದ ಸಂದೇಶವನ್ನು ಎಲ್ಲೆಡೆ ಸಾರುವಂತೆ ಡಾ.ಆಕಾಶ್ ಅವರು ಕೋರಿದ್ದಾರೆ.

Sneha Gowda

Recent Posts

ಫೇಸ್ ಬುಕ್​ನ ಜಾಹೀರಾತಿನ ಜಾಲಕ್ಕೆ ಬಿದ್ದು 2 ಲಕ್ಷ ಕಳ್ಕೊಂಡ ಮಹಿಳೆ

ಫೇಸ್ ಬುಕ್​ನ ಒಂದು ಜಾಹಿರಾತಿಗೆ ಮರುಳಾದ ಮಹಿಳೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಫೇಸ್…

6 mins ago

ತಂದೆ ಮದ್ಯಪಾನ ಮಾಡಿ ತಾಯಿಗೆ ಥಳಿತ: ನೊಂದು ಮಗಳು ಆತ್ಮಹತ್ಯೆ

ಮದ್ಯಪಾನ ಮಾಡಿ ತಾಯಿಗೆ ಥಳಿಸುತ್ತಿದ್ದ ತಂದೆಯ ವರ್ತನೆಯಿಂದ ಬೇಸರಗೊಂಡು 17 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

9 mins ago

ಸೋಲುವ ಭಯದಿಂದ ಬಿಜೆಪಿ ಈರೀತಿ ಪದಗಳನ್ನು ಪ್ರಯೋಗಿಸುತ್ತಿದೆ: ಸಚಿನ್‌ ಪೈಲೆಟ್‌

ಬಿಜೆಪಿಯ ಹಿರಿಯ ನಾಯಕರು ಬಳಸುತ್ತಿರುವ ಭಾಷೆಯನ್ನು ನೋಡಿದರೆ ಅವರು ತಮ್ಮ ಗುರಿಯನ್ನು ತಲುಪುವಲ್ಲಿ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್‌…

18 mins ago

29 ರಿಂದ ಮೇ 25ರ ವರೆಗೆ ಹೈಕೋರ್ಟ್‌ಗೆ ಬೇಸಿಗೆ ರಜೆ

ಹೈಕೋರ್ಟ್‌ಗೆ ಏ.29 ರಿಂದ ಮೇ 25ರ ವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ…

27 mins ago

ಕೇಂದ್ರದಿಂದ ಬರ ಪರಿಹಾರ ಘೋಷಣೆ; ಸುಪ್ರೀಂ ಛೀಮಾರಿಯ ಪ್ರಭಾವ

ಕರ್ನಾಟಕಕ್ಕೆ ೩,೪೫೪ ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

41 mins ago

ಇಂಡಿಗನತ್ತದಲ್ಲಿ ಮರು ಮತದಾನ : ಚುನಾವಣಾ ಆಯೋಗ ಘೋಷಣೆ

ಶುಕ್ರವಾರ ಮತದಾನ ಬಹಿಷ್ಕಾರ ನಡೆಸಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಮತಗಟ್ಟೆ ಧ್ವಂಸ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ…

51 mins ago