Categories: ಮಡಿಕೇರಿ

ಮಡಿಕೇರಿ: ವಿಹಿಂಪ ಜಿಲ್ಲಾ ಅಧ್ಯಕ್ಷರ ಕೊಲೆಗೆ ಯತ್ನ ಪ್ರಕರಣ, ಆರೋಪಿಗಳ ಬಂಧನವಾಗದಿದ್ದಲ್ಲಿ ಹೋರಾಟ

ಮಡಿಕೇರಿ: ಚುನಾವಣೆಯ ಸಂದರ್ಭದಲ್ಲಿ ಚಟ್ಟಳ್ಳಿಯ ಅಭ್ಯಾಲ ದಲ್ಲಿ ವಿಶ್ವ ಹಿಂದು ಪರಿಷತ್ನ ಜಿಲ್ಲಾಧ್ಯಕ್ಷ ಹಾಗೂ ವಕೀಲರಾದ ಕೃಷ್ಣಮೂರ್ತಿ ಅವರ ಕಾರಿಗೆ  ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಕೃಷ್ಣಮೂರ್ತಿ ಅದೃಷ್ಟವಶಾತ್‌ ಬಚಾವಾಗಿದ್ದರು. ಈ ಸಂಬಂಧ ಕೃಷ್ಣಮೂರ್ತಿಯವರು ದೂರು ನೀಡಿ ಪ್ರಕರಣ ದಾಖಲಾಗಿತ್ತು.

ಈ ಘಟನೆ ನಡೆದು ಇಂದಿಗೆ ಒಂದೂವರೆ ತಿಂಗಳು ಕಳೆದರೂ ಕೂಡ ಆರೋಪಿಗಳ ಪತ್ತೆ ಆಗಿಲ್ಲ.  ಪೊಲೀಸ್ ವರಿಷ್ಠಾಧಿಕಾರಿಗಳು ಯಾಕೆ ಈ ಪ್ರಕರಣದತ್ತ ಹೆಚ್ಚು ಮಹತ್ವ ನೀಡಿಲ್ಲ ಎಂಬುದು ಈಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಆರೋಪಿಗಳನ್ನು ಕೂಡಲೇ ಬಂದಿಸುವಂತೆ ಮಡಿಕೇರಿಯ ವಕೀಲರು ಕಲಾಪ ಬಹಿಷ್ಕರಿಸಿ ಮುಷ್ಕರವನ್ನು ಕೂಡ ನಡೆಸಿದ್ದರು. ಆದರೆ ಇದುವರೆಗೂ ಕೂಡ ತನಿಖೆಯ ಪ್ರಗತಿ ಕಾಣದೆ ಇನ್ನೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದೆಂದು ಜಿಲ್ಲೆಯ ವಿವಿಧ ಸಂಘಟನೆಗಳು ಎಚ್ಚರಿಸಿದ್ದಾರೆ.

Ashika S

Recent Posts

ಬೀದರ್‌ನಲ್ಲಿ ಪರಿಶಿಷ್ಟ ಮುಖಂಡ ಬಿಜೆಪಿ ಸೇರ್ಪಡೆ

ಔರಾದ್‌ ತಾಲ್ಲೂಕಿನ ವಡಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಜಾತಿಯ ಮುಖಂಡ ಬಾಬುರಾವ ಅಡಕೆ ಅವರು ನಗರದಲ್ಲಿ ಶನಿವಾರ ಬಿಜೆಪಿ…

2 mins ago

ಬೀದರ್‌ನಲ್ಲಿ ಸರಳ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 10ರಂದು ಸರಳ ಹಾಗೂ ಸಾಂಕೇತಿಕವಾಗಿ…

13 mins ago

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ

23 mins ago

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

37 mins ago

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

57 mins ago

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

1 hour ago