News Karnataka Kannada
Wednesday, May 01 2024
ಮಡಿಕೇರಿ

ಮಡಿಕೇರಿ: ಮೇ, 10 ರಂದು ಮತಹಾಕಿ ಸೆಲ್ಫಿ ಕ್ಲಿಕ್ಕಿಸಿ ಫೋಟೋ ಸ್ಪರ್ಧೆ

Assembly elections: 78.94% voter turnout recorded in Sullia this time
Photo Credit : News Kannada

ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ‘ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ಆಯೋಜಿಸಿದೆ.

ಮತದಾನ ಮಾಡಿದ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯುವಕ ಯುವತಿಯರನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ. ಉತ್ತಮ ಫೋಟೋಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.

ಮತದಾನ ಮಾಡಿದ ನಂತರ ಏಕಮಾತ್ರವಾಗಿ ಅಥವಾ ಗುಂಪಿನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕುಟುಂಬ ವರ್ಗ, ಸ್ನೇಹಿತರೊಂದಿಗೆ ಇರುವ ಫೋಟೋಗಳಿಗೆ ಆದ್ಯತೆ ನೀಡಲಾಗುವುದು. ಮತಗಟ್ಟೆಯ ಒಳಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗುವಂತಿಲ್ಲ. ಮತದಾನ ಮಾಡಿದ ನಂತರವಷ್ಟೇ ತಮ್ಮ ಫೋನನ್ನು ಬಳಸಿ ಮತಗಟ್ಟೆಯ ಹೊರಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸಬಹುದು ಎಂದು ಹೇಳಿದ್ದಾರೆ.

ಛಾಯಾಚಿತ್ರವನ್ನು ಮೇ, 10 ರ ಮತದಾನದ ದಿನದಂದು ಸಂಜೆ 6 ಗಂಟೆಯೊಳಗೆ ಕಳುಹಿಸಬೇಕು. ಉತ್ತಮವಾದ ಒಂದು ಫೋಟೋ ಮಾತ್ರ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಫೋಟೋವನ್ನು 6363994172 ಅಥವಾ 9743144135 ನಂಬರ್‍ಗೆ ವಾಟ್ಸಾಪ್ ಮೂಲಕ ಕಳುಹಿಸುವುದು. ಸ್ಪರ್ಧಿಯ ಹೆಸರು, ತಂದೆಯ/ ಗಂಡನ ಹೆಸರು, ಮತಗಟ್ಟೆ ಸಂಖ್ಯೆ, ಜನ್ಮ ದಿನಾಂಕ ಹಾಗೂ ತಮ್ಮ ಮೊಬೈಲ್ ಸಂಖ್ಯೆಯ ವಿವರಗಳೊಂದಿಗೆ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ಸೆಲ್ಫಿಯನ್ನು ಕಳುಹಿಸುವುದು.

ಮತಗಟ್ಟೆಯ 100 ಮೀಟರ್ ಒಳಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದು. ಮತ ಹಾಕಿದ ಗುರುತಾಗಿ, ಮತ ಕೇಂದ್ರದಲ್ಲಿ ಬೆರಳಿಗೆ ಹಾಕಿರುವ ‘ಇಂಕ್’ ಕಾಣಿಸುವಂತೆ ಫೋಟೋ ತೆಗೆಯಬೇಕು. ತಾವುಗಳು ಕಳುಹಿಸುವ ಉತ್ತಮವಾದ ಫೋಟೋಗಳನ್ನು ಜಿಲ್ಲಾಡಳಿತದ ವೆಬ್‍ಸೈಟ್, ಫೇಸ್‍ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗುವುದು ಎಂದು ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು