Categories: ಮಡಿಕೇರಿ

ಮಡಿಕೇರಿ: ಪರಿಹಾರ ದೊರಕಿಸಿಕೊಡಲು ಬಂದವರಿಗೆ ಅಗೌರವ ತೋರಿದ್ದು ಖಂಡನೀಯ ಎಂದ ಕೊಡಗು ಕಾಂಗ್ರೆಸ್

ಮಡಿಕೇರಿ: ಮಹಾ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ದೊರಕಿಸಿಕೊಡುವ ಸದುದ್ದೇಶದಿಂದ ಕೊಡಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಅಗೌರವ ತೋರಿರುವುದು ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಜನರ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ತೋರಿಸಿ, ನಿಂದಿಸಿ, ಕಾರಿಗೆ ಮೊಟ್ಟೆಯನ್ನು ಎಸೆದಿರುವುದು ಬಿಜೆಪಿ ಪಕ್ಷದ ಸಂಸ್ಕತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಜನ ಸಾಮಾನ್ಯರು ಹಾಗೂ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದೆ ಅತಂತ್ರರಾಗಿದ್ದಾರೆ. ನೋವಿನಲ್ಲಿರುವ ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಮತ್ತು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲೆಂದು ಸಿದ್ದರಾಮಯ್ಯನವರು ಆಗಮಿಸಿದ್ದರು.

ಆದರೆ ಬಿಜೆಪಿ ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶಿಸುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಯತ್ನಿಸಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ಜಿಲ್ಲೆಗಳಿಗೆ ಪರಿಹಾರ ನೀಡಿರುವ ರಾಜ್ಯ ಸರ್ಕಾರ ಕೊಡಗನ್ನು ಕಡೆಗಣಿಸಿದೆ. ಈ ಬಗ್ಗೆ ಜಿಲ್ಲೆಯ ಜನರಿಗೆ ತೀವ್ರ ಅಸಮಾಧಾನವಿದೆ. ಸಿದ್ದರಾಮಯ್ಯ ಅವರ ಭೇಟಿಯಿಂದ ರಾಜಕೀಯವಾಗಿ ಮತ್ತಷ್ಟು ನಷ್ಟವಾಗಬಹುದೆನ್ನುವ ಹತಾಶ ಮನೋಭಾವದಿಂದ ಬಿಜೆಪಿ ಮಂದಿ ಅತ್ಯಂತ ಕ್ಷುಲ್ಲಕ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ ಎಂದು ಸುರೇಶ್ ಆರೋಪಿಸಿದ್ದಾರೆ.

Ashika S

Recent Posts

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

18 mins ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

35 mins ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

56 mins ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

1 hour ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

2 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

2 hours ago