News Karnataka Kannada
Friday, April 12 2024
Cricket
ಮಡಿಕೇರಿ

ಮಡಿಕೇರಿ: ಮಳೆಯಲ್ಲಿ ಮುಳುಗಡೆಯಾದ ಸೇತುವೆ ಪರಿಶೀಲಿಸಿದ ಕಿರಣ್ ಗೌರಯ್ಯ

Kiran Gowrayya inspects bridge submerged in rain
Photo Credit : News Kannada

ಮಡಿಕೇರಿ: ತಾಲ್ಲೂಕು ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಮತ್ತಾರಿ ಸೇತುವೆಯು ಮಳೆಯಲ್ಲಿ ಮುಳುಗಡೆಯಾಗಿದೆ. ಒಟ್ಟು 15 ಮನೆಗಳಿವೆ. 65 ಜನರು ವಾಸವಾಗಿದ್ದು, ಇಲ್ಲಿನ ಸೇತುವೆಯನ್ನು ಮಡಿಕೇರಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಇಂದು ಪರಿಶೀಲಿಸಿದರು.

ಹಾಗೆಯೇ ಭಾಗಮಂಡಲ ತ್ರಿವೇಣಿ ಸಂಗಮ, ಭಾಗಮಂಡಲ -ನಾಪೋಕ್ಲು ರಸ್ತೆಗೆ ಬಂದಿರುವ ನೀರಿನ ಮಟ್ಟವನ್ನು ವೀಕ್ಷಿಸಿದರು. ಭಾಗಮಂಡಲ ಗ್ರಾಮದಲ್ಲಿರುವ ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ನಡೆಸಲು ಸಿದ್ಧತೆಯಾಗಿದ್ದು, ಹೆಚ್ಚಿನ‌ ಮಳೆ ಆದಲ್ಲಿ ಕಾಳಜಿ/ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾಗಮಂಡಲ – ನಾಪೋಕ್ಲು ರಸ್ತೆಯ ಮೇಲೆ ಅಂದಾಜು 2 ಅಡಿ ನೀರು ಬಂದಿದೆ. ಗೃಹ ರಕ್ಷಕ ದಳದ ತಂಡವು ಬೋಟ್ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು‌ ತಹಶಿಲ್ದಾರ್ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು