News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ: ಭಾವನಾತ್ಮಕ ವಿಚಾರಗಳ ಮುಂದೆ ಆಡಳಿತಾತ್ಮಕ ವಿಚಾರಗಳು ಕೊಚ್ಚಿಹೋಗುತ್ತಿವೆ

Administrative issues are getting washed away in the face of emotional issues
Photo Credit : News Kannada

ಮಡಿಕೇರಿ: ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ, ರಸ್ತೆ, ಮಾನವ ವನ್ಯಜೀವಿ ಸಂಘರ್ಷ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಿಜೆಪಿ ಬರಿ ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸುತ್ತಿದ್ದು, ಭಾವನಾತ್ಮಕ ವಿಚಾರಗಳ ಮದ್ಯೆ ಆಡಳಿತಾತ್ಮಕ ಭಾವನೆಗಳು ಕೊಚ್ಚಿಹೋಗುತ್ತಿವೆ. ಅಕ್ಷರ, ಅನ್ನ, ಅಭಿವೃದ್ಧಿ, ಬದುಕು, ಉದ್ಯೋಗಕ್ಕೆ ಯಾವುದೇ ಮನ್ನಣೆ ಇಲ್ಲದಂತಾಗಿದೆ ಎಂದು ಮಾಜಿ ಸಂಸದ ಅಡಗೂರು ಎಚ್. ವಿಶ್ವನಾಥ್  ಹೇಳಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಜನರಿಗೆ ಕಿರುಕುಳ ನೀಡುವಂತ, ನೈತಿಕ ಪೊಲೀಸ್ ಗಿರಿ ನಡೆಸುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳುವ ಬಜರಂಗದಳದ ನಿಷೇದ ಸಮರ್ಥನೀಯ- ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ. ಬಜರಂಗದಳ ಬೇರೇ, ಆಂಜನೇಯನೇ ಬೇರೆ, ನಾನು ಆಂಜನೇಯನ ಭಕ್ತ ಎಂದರು.

ಬಿಜೆಪಿ ಸರಕಾರ ಮೀಸಲಾತಿಯ ಅರ್ಥವನ್ನೇ ಹಳ್ಳ ಹಿಡಿಸಿದೆ, ಎಚ್.ವಿಶ್ವನಾಥ್ ಟೀಕೆ ಭಾರತದಲ್ಲಿ ಬೇರೆ ಬೇರೆ ಧರ್ಮ, ಭಾಷೆಗಳಿವೆ. ಬದುಕು ಬೇರೇ ಬೇರೇ ರೀತಿ ಇದೆ. ದೇಶದ ಪ್ರಧಾನಿಗಳು ಎಲ್ಲಾ ಭಾಷೆ, ಜಾತಿ, ಧರ್ಮದವರನ್ನು ಒಂದೇ ರೀತಿ ಕಾಣಬೇಕು. ಭಾರತದಷ್ಟೇ ಮನಸ್ಸು ಕೂಡ ವಿಶಾಲವಾಗಿರಬೇಕು.

ದೇಶದ ಪ್ರಧಾನಿಗಳು ಒಂದೆರೆಡು ಕಡೆ ಚುನಾವಣಾ ಭಾಷಣ ಮಾಡುತ್ತಾರೆ ಮತ್ತು ಆ ಭಾಷಣಗಳ ಮೇಲೆ ಚರ್ಚೆಗಳಾಗುತ್ತವೆ ಆದರೆ ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರಕ್ಕೆ ಹತ್ತಾರು ಭಾರಿ ಭೇಟಿ ನೀಡುತ್ತಿದ್ದಾರೆ ಇದರರ್ಥ ಬಿಜೆಪಿ ಸರಕಾರದ ಮೇಲೆ ಜನನಂಬಿಕೆ ಕಳೆದುಕೊಂಡಿದ್ದಾರೆ. ನಂಬಿಕೆಯನ್ನು ಮೂಡಿಸಲು ಮತ್ತೇ ಮತ್ತೇ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ  ಎಂದರು.

ಕೊಡಗಿನ ಎರಡು ಕ್ಷೇತ್ರಗಳಲ್ಲಿ ಮತದಾರರು ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ಚಂದ್ರಮೌಳಿ, ಟಿ.ಪಿ.ರಮೇಶ್, ಪಿ.ಸಿ.ಹಸೈನಾರ್, ಕೆ.ಎಂ.ಲೋಕೇಶ್, ಎಂ.ಎ.ಉಸ್ಮಾನ್ ಭಾಗಿಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು