News Karnataka Kannada
Thursday, April 18 2024
Cricket
ಮಡಿಕೇರಿ

ಅಸ್ವಸ್ಥ ಮಹಿಳೆಯನ್ನು ಅನಾಥಾಶ್ರಮಕ್ಕೆ ಸೇರಿಸಿ ಪುಣ್ಯದ ಕಾರ್ಯ

It's a pious act to get a sick woman admitted to an orphanage
Photo Credit : News Kannada

ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಮಲಗುತ್ತಿದ್ದರು. ಅಲ್ಲದೆ ಜನರಿಗೆ ಕೆಟ್ಟ ಶಬ್ದಗಳಿಂದ ಬೈದು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ದೊಣ್ಣೆ ಮತ್ತು ಕಲ್ಲುಗಳಿಂದ ಜನರಿಗೆ ಹೊಡೆಯಲು ಹೋಗುತ್ತಿದ್ದರು. ಇದನ್ನರಿತ ಕೊಡ್ಲಿಪೇಟೆ ಜನರು ಮಹಿಳೆ ಕುರಿತು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದರು. ಬಳಿಕ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರನ್ನು ಸಂಪರ್ಕಿಸಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅನಾಥಾಶ್ರಮಕ್ಕೆ ಸೇರ್ಪಡೆ ಮಾಡಬೇಕು ಎಂದು ವಿನಂತಿಸಿದ್ದರು.

ಈ ನಿಟ್ಟಿನಲ್ಲಿ ಬಸ್‌ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಫ್ರಾನ್ಸಿಸ್ ಡಿಸೋಜಾ ಅವರು ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ಸೇರ್ಪಡೆ ಮಾಡಿದ್ದಾರೆ.

ಈ ಕುರಿತು ವಿವರಿಸಿರುವ ಫ್ರಾನ್ಸಿಸ್, ಮಹಿಳೆಯನ್ನು ಹರಸಾಹಸಪಟ್ಟು ಅನಾಥಾಶ್ರಮಕ್ಕೆ ಸೇರ್ಪಡೆ ಮಾಡಿದ್ದೇವೆ. ಮಹಿಳೆಯನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಆದರೂ ಸ್ವತಃ ನಾನೇ ಕಾರಿನ ವ್ಯವಸ್ಥೆ ಮಾಡಿ ಮಹಿಳೆಯೊಂದಿಗೆ ಬೆಂಗಳೂರಿಗೆ ತೆರಳಿ ಅನಾಥಾಶ್ರಮಕ್ಕೆ ಸೇರ್ಪಡೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ಬೆಂಗಳೂರಿಗೆ ಆಕೆಯನ್ನು ಕರೆದುಕೊಂಡು ಹೋಗುವ ವೇಳೆ ಗ್ರಾಪಂ ಪೌರಕಾರ್ಮಿಕರಾದ ಕಾಂತರಾಜ್ ಸಹಕಾರ ನೀಡಿದ್ದರು ಎಂದು ಫ್ರಾನ್ಸಿಸ್‌ ಸ್ಮರಿಸಿಕೊಂಡಿದ್ದಾರೆ.

ಮಹಿಳೆ ರಕ್ಷಣೆ ವೇಳೆ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶೇಖರ್ ಹಾಗೂ ನಂದೀಶ್ ಹಾಗೂ ಪ್ರಸನ್ನ ಹಾಗೂ ಲಾವಣ್ಯ ಧಮಪ್ರಕಾಶ್ ಹಾಗೂ ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಪ್ ಮತ್ತು ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭವನ ಹಾಗೂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ದೀಪಕ್ ಮತ್ತು ಆಶಾ ಕಾರ್ಯಕರ್ತರಾದ ತ್ರಿವೇಣಿ ಹಾಗೂ ಕೊಡ್ಲಿಪೇಟೆ ಪೌರಕಾರ್ಮಿಕರಾದ ಕಾಂತರಾಜ್ ಹಾಗೂ ಕಾರು ಚಾಲಕ ರಾಮರವರು ಭಾಗವಹಿಸಿದ್ದರು.

ಇಂತಹ ಮಾನಸಿಕ ಅಸ್ವಸ್ಥರು ಹಾಗೂ ವೃದ್ಧರು ಹಾಗೂ ಅನಾಥರು ಬಸ್ ನಿಲ್ದಾಣದಲ್ಲಿ ಯಾರೇ ಇದ್ದರೂ ನಮಗೆ ತಿಳಿಸಿದಲ್ಲಿ ಅನಾಥಾಶ್ರಮಕ್ಕೆ ಸೇರ್ಪಡೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಫ್ರಾನ್ಸಿಸ್‌ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು