News Karnataka Kannada
Sunday, April 14 2024
Cricket
ಮಡಿಕೇರಿ

ಮಡಿಕೇರಿ: ಕೊಡಗಿನಲ್ಲಿ ಹುಲಿ ದಾಳಿಗೆ ಹಸು ಬಲಿ

Cow killed in tiger attack in Kodagu
Photo Credit : By Author

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ ಆರಂಭವಾಗಿದ್ದು, ಇದೀಗ ಹಸುವನ್ನು ಬಲಿ ಪಡೆದಿರುವ ಹುಲಿ ಜನರಲ್ಲಿ ಭಯ ಹುಟ್ಟಿಸಿದೆ.

ದಕ್ಷಿಣಕೊಡಗಿನ ಅದರಲ್ಲೂ ನಾಗರಹೊಳೆ ಅಭಯಾರಣ್ಯಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹುಲಿಗಳು ಆಗಾಗ್ಗೆ ಕಾಣಿಸಿಕೊಂಡು ಜನಜಾನುವಾರುಗಳನ್ನು ಬಲಿಪಡೆಯುವುದು ಹೊಸದೇನಲ್ಲ. ಈ ಬಗ್ಗೆ ಹಲವು ರೀತಿಯ ಹೋರಾಟಗಳನ್ನು ನಡೆಸಿ ಹುಲಿ ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಹುಲಿ ಹಾವಳಿ ತಡೆಗಟ್ಟುವುದು ಸಾಧ್ಯವಾಗದ ಕೆಲಸವಾಗಿದೆ.

ಇದೀಗ ಪೊನ್ನಂಪೇಟೆ ತಾಲೂಕು ಬೆಸಗೂರು ಗ್ರಾಮದಲ್ಲಿ ಹುಲಿ ಮತ್ತೊಮ್ಮೆ ಪ್ರತ್ಯಕ್ಷವಾಗಿ ಹಸುವನ್ನು ಬಲಿಪಡೆದಿದೆ. ಈ ಹಸು ಬೆಸಗೂರು ಗ್ರಾಮದ ಬಲ್ಲಿಮಾಡ ಸಂಪತ್ ಅವರಿಗೆ ಸೇರಿದ್ದಾಗಿದೆ. ಇದನ್ನು ಮೇಯಲು ಬಿಟ್ಟಿದ್ದರು. ಆದರೆ ಹಸು ಕಾಣಿಸದಿದ್ದಾಗ ಅದರ ಹುಡುಕಾಟ ನಡೆಸಿದ್ದು ಈ ವೇಳೆ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು, ಹತ್ತಿರ ಹೋಗಿ ಪರಿಶೀಲಿಸಿದಾಗ ಹುಲಿ ಹಸುವನ್ನು ಕೊಂದು ಅರ್ಧ ತಿಂದಿರುವುದು ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಪೊನ್ನಂಪೇಟೆ ವಿಭಾಗದ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹುಲಿ ಸೆರೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು