News Karnataka Kannada
Thursday, April 25 2024
Cricket
ಮಡಿಕೇರಿ

ಸೋಲಿನ ಭಯದಿಂದ ಬಿಜೆಪಿ ದಿಕ್ಕು ತಪ್ಪಿದೆ- ಅಖಿಲೇಖ್ ಯಾದವ್

BJP lost its way out of fear of defeat: Akhilesh Yadav
Photo Credit : News Kannada

ಮಡಿಕೇರಿ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಖ್ ಯಾದವ್ ಇಂದು ಮಡಿಕೇರಿ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜನರಲ್ ತಿಮ್ಮಯ್ಯ ಸೇನಾ ಸಾಧನೆ ಬಗ್ಗೆ ಮಾಹಿತಿ ಪಡೆದರು. ತಿಮ್ಮಯ್ಯ ಅವರ ಅಪ್ರತಿಮ ಸೇನಾ ಸೇವೆ ಎಲ್ಲರಿಗೂ ಮಾದರಿ ಎಂದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ಮಡಿಕೇರಿ ದಸರಾ ನೋಡಲು ಬಂದಿದ್ದ ನೆನಪುಗಳನ್ನು ಅಖಿಲೇಶ್ ಮೆಲುಕು ಹಾಕಿದರು. ಕೊಡಗಿಗೆ ಅನೇಕ ಸಲ ಬಂದಿದ್ದೆ ಎಂದು ಮಡಿಕೇರಿ ಸೌಂದರ್ಯದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ತಿಮ್ಮಯ್ಯ ಮ್ಯೂಸಿಯಂ ಬಗ್ಗೆ ಮಾಹಿತಿ ನೀಡಿದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧುರಿ ಈ ವೇಳೆ ಜತೆಗಿದ್ದರು. ಅಖಿಲೇಶ್ ಯಾದವ್ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮ್ಯೂಸಿಯಂಗೆ ಭೇಟಿ ನೀಡಿದರು.

ಬಿಜೆಪಿ ಸೋಲಿನ ಹಾದಿಯಲ್ಲಿದೆ. ಪ್ರತಿಪಕ್ಷಗಳ ಮಹಾಘಟ ಬಂದನ್ ಕಂಡು ಬಿಜೆಪಿ ಹೆದರಿದೆ. ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆದ ದಿನದಂದೇ ಬಿಜೆಪಿ ತನ್ನ ಮಿತ್ರ ಪಕ್ಷಗಳ ಸಭೆಗೆ ತೀರ್ಮಾನಿಸಿದ್ದೇ ಬಿಜೆಪಿ ಆತಂಕಕ್ಕೊಳಗಾಗಿದ್ದಕ್ಕೆ ಸಾಕ್ಷಿ ಎಂದರು. ಕರ್ನಾಟಕದಲ್ಲಿ ಭ್ರಷ್ಟಾಚಾರದಿಂದಾಗಿ ಬಿಜೆಪಿ ಸೋತು ಹೋಗಿದೆ. ಇದೇ ಸ್ಥಿತಿ ಕೇಂದ್ರದಲ್ಲಿಯೂ ಆಗಲಿದೆ. ಸೋಲಿನ ಭಯದಿಂದ ಬಿಜೆಪಿ ದಿಕ್ಕುತಪ್ಪಿದೆ. ಪ್ರತಿಪಕ್ಷಗಳ ಮೈತ್ರಿಯಿಂದಾಗಿ ಈಗ ಇಂ.ಡಿ.ಯಾ. ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಇಂಡಿಯಾವನ್ನು ಪ್ರಬಲಗೊಳಿಸುತ್ತಾ ಭಾರತೀಯರ ಆಶೋತ್ತರಕ್ಕೆ ತಕ್ಕಂತೆ ದೇಶವನ್ನು ಬಿಜೆಪಿ ಹಿಡಿತದಿಂದ ದೂರಮಾಡಲಿದ್ದೇವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು